ಡಾ. ವಾಮನಾಚಾರ್ಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಸುರೇಶ್‌ ಕುಮಾರ್‌

7

ಡಾ. ವಾಮನಾಚಾರ್ಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಸುರೇಶ್‌ ಕುಮಾರ್‌

Published:
Updated:
ಡಾ. ವಾಮನಾಚಾರ್ಯ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಸುರೇಶ್‌ ಕುಮಾರ್‌

ಬೆಂಗಳೂರು: ಸುದ್ದಿವಾಹಿನಿಯೊಂದರ ಪ್ಯಾನಲ್ ಚರ್ಚೆಯಲ್ಲಿ "ಜಾನುವಾರುಗಳ ಮಾರಾಟ" (ಗೋ ಹತ್ಯೆ ನಿಷೇಧ ಎಂದೇ ವಿಶ್ಲೇಷಿಸಲ್ಪಡುತ್ತಿರುವ) ಕುರಿತ ಕೇಂದ್ರ ಸರಕಾರದ ಸುತ್ತೋಲೆ ಬಗ್ಗೆ ಬಿಜೆಪಿಯ ಡಾ. ವಾಮನಾಚಾರ್ಯ ರವರು ವ್ಯಕ್ತ ಪಡಿಸಿರುವ ಭಾವನೆಗಳಿಗೆ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿಯ ಹಿರಿಯ ನಾಯಕರಾದ  ಎಸ್‌. ಸುರೇಶ್ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಡಾ. ವಾಮನಾಚಾರ್ಯ  ಅವರ ಮಾತುಗಳು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತಗಳಿಗೆ ಸಂಪೂರ್ಣ ವಿರೋಧವಾಗಿವೆ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಸ್ವತಃ ಡಾ. ವಾಮನಾಚಾರ್ಯರವರು ಹೇಳಿಕೆ ನೀಡಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಮತ್ತು ತಮ್ಮ ಮಾತುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಸುರೇಶ್ ಕುಮಾರ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry