ಲಂಡನ್‍ನಲ್ಲಿ ಉಗ್ರ ದಾಳಿ ವೇಳೆ ಜೀವ ಭಯದಿಂದ ಓಡುವಾಗಲೂ ಬಿಯರ್ ಗ್ಲಾಸ್ ಕೈಯಲ್ಲಿ ಹಿಡಿದು ಓಡಿದ ಯುವಕ!

7

ಲಂಡನ್‍ನಲ್ಲಿ ಉಗ್ರ ದಾಳಿ ವೇಳೆ ಜೀವ ಭಯದಿಂದ ಓಡುವಾಗಲೂ ಬಿಯರ್ ಗ್ಲಾಸ್ ಕೈಯಲ್ಲಿ ಹಿಡಿದು ಓಡಿದ ಯುವಕ!

Published:
Updated:
ಲಂಡನ್‍ನಲ್ಲಿ ಉಗ್ರ ದಾಳಿ ವೇಳೆ ಜೀವ ಭಯದಿಂದ ಓಡುವಾಗಲೂ ಬಿಯರ್ ಗ್ಲಾಸ್ ಕೈಯಲ್ಲಿ ಹಿಡಿದು ಓಡಿದ ಯುವಕ!

ಲಂಡನ್ : ಬ್ರಿಟನ್‌ ರಾಜಧಾನಿ ಲಂಡನ್ನಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ‘ಲಂಡನ್‌ ಸೇತುವೆ’ ಬಳಿ ಭಯೋತ್ಪಾದಕರು ಅಟ್ಟಹಾಸ ಮಾಡಿದಾಗ ಆ ಪರಿಸರದಲ್ಲಿದ್ದ ಜನರು ಜೀವ ಭಯದಿಂದ ಓಡುತ್ತಿದ್ದರೆ, ಅದರಲ್ಲೊಬ್ಬ ಯುವಕ  ಕೈಯಲ್ಲಿ ಬಿಯರ್ ಗ್ಲಾಸ್ ಹಿಡಿದುಕೊಂಡು ವೇಗವಾಗಿ ನಡೆಯುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಜನರೆಲ್ಲರೂ ಪ್ರಾಣ ಭಯದಿಂದ ಓಡುತ್ತಿದ್ದರೆ ಈ ಯುವಕ ಮಾತ್ರ ಕೈಯಲ್ಲಿ ಬಿಯರ್ ಗ್ಲಾಸ್ ಹಿಡಿದು ಗೆಳತಿಯೊಂದಿಗೆ ವೇಗವಾಗಿ ನಡೆಯುತ್ತಿರುವ ವಿಡಿಯೊ ಟ್ವಿಟರ್‍‍ನಲ್ಲಿ ಅಪ್‍ಲೋಡ್ ಆಗಿದೆ. ಕೆಲವರು ಈ ಯುವಕನ ಬಗ್ಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಟೀಕಿಸಿದ್ದಾರೆ.

ವಿವರ: ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಬಿಳಿ ವ್ಯಾನೊಂದರಲ್ಲಿ ಬಂದ ಶಂಕಿತರು, ಲಂಡನ್‌ ಸೇತುವೆ ಬಳಿ ವ್ಯಾನನ್ನು ಪಾದಚಾರಿ ಮಾರ್ಗಕ್ಕೆ ನುಗ್ಗಿಸಿ, ಜನರ ಮೇಲೆ ಹರಿಸಿದರು. ಕೈಯಲ್ಲಿ ದೊಡ್ಡ ಚೂರಿ ಹೊಂದಿದ್ದ ಅವರು ವಾಹನ ಬಿಟ್ಟು ಸಮೀಪದ ಬರೊ ಮಾರುಕಟ್ಟೆಯತ್ತ ಓಡಿ ‘ಇದು ಅಲ್ಲಾನಿಗಾಗಿ’ ಎಂದು ಘೋಷಣೆ ಕೂಗುತ್ತಾ ಎದುರಿಗೆ ಸಿಕ್ಕಿದವರ ಮೇಲೆ  ಮನಬಂದಂತೆ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಜೂನ್‌ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳ ಮುನ್ನ ಈ ಪೈಶಾಚಿಕ ಕೃತ್ಯ ನಡೆದಿದೆ. ದಾಳಿ ನಡೆಸಿದ ಕೇವಲ ಎಂಟು ನಿಮಿಷಗಳಲ್ಲಿ ಮೂವರು ಶಂಕಿತರನ್ನು ಗುಂಡಿಟ್ಟು ಕೊಲ್ಲುವಲ್ಲಿ ಲಂಡನ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry