ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕವೇ ಪರಿಹಾರವಾಗಬೇಕು

6

ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕವೇ ಪರಿಹಾರವಾಗಬೇಕು

Published:
Updated:
ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕವೇ ಪರಿಹಾರವಾಗಬೇಕು

ನವದೆಹಲಿ: ಈ ಮೂರು ವರ್ಷಗಳಲ್ಲಿ ವಿದೇಶ ರಾಜ್ಯಗಳಲ್ಲಿ ಸಿಲುಕಿದ್ದ 80,000 ಭಾರತೀಯರನ್ನು ತವರಿಗೆ ಕರೆತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತರ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಇದಕ್ಕೆ ಅನುಕೂಲವಾಯಿತು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ವಿದೇಶ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲೇಬೇಕು,

ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಅವರು ಮೋದಿ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ್ದಾರೆ.

ಮುಖ್ಯಾಂಶಗಳು
ಪಾಕಿಸ್ತಾನ ಮತ್ತು ಕಾಶ್ಮೀರ ಬಗ್ಗೆ
ನಾವು ಪಾಕಿಸ್ತಾನದ ಬಗ್ಗೆ ಹೆಚ್ಚಿನ ಶಕ್ತಿ ಮತ್ತು ಸಮಯವನ್ನು ವ್ಯಯಿಸುವುದಿಲ್ಲ, ನಮ್ಮ  ಪಾಲಿಗೆ ಪಾಕಿಸ್ತಾನ ಎಂದರೆ ಬೇರೊಂದು ದೇಶ.
ಮೂರು ಸಮಸ್ಯೆಗಳನ್ನು ನೆನಪಿಡಿ: ನಾವು ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಪರಿಹರಿಸಲಿಚ್ಛಿಸುತ್ತೇವೆ. ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಭಯೋತ್ಪಾದನೆ ಬಗ್ಗೆ ಮಾತನಾಡಲಿದ್ದೇವೆ, ಮಾತುಕತೆಗಳು ಏಕಕಾಲದಲ್ಲಿ ನಡೆಯುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‍‍ಗೆ ದಿಢೀರ್ ಭೇಟಿ ನೀಡಿದ್ದು ಇದೇ ಉದ್ದೇಶದಿಂದಾಗಿತ್ತು.  ನಾವು ಪಾಕಿಸ್ತಾನದ ಬಗ್ಗೆ ಒಂದು ಹೆಜ್ಜೆ ಮುಂದಿಡುತ್ತಿಲ್ಲ, ಎರಡು ಹೆಜ್ಜೆ ಹಿಂದಿಡುತ್ತಿದ್ದೇವೆ.

ಮುಂಬರಲಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮ್ಮೇಳನದ ವೇಳೆ ಆಸ್ಥಾನದಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು  ಮೋದಿ ನಡುವೆ ಯಾವುದೇ ಭೇಟಿ ನಿಗದಿ ಪಡಿಸಿಲ್ಲ.

ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಿಂದಲೇ ಕಾಶ್ಮೀರ ಸಮಸ್ಯೆ ಪರಿಹರಿಸಹಬೇಕಿದೆ.

ಪಾಕಿಸ್ತಾನದ ಜತೆಗಿನ ಮಾತುಕತೆಗೆ ಮೂರನೆಯವರು ಮಧ್ಯಸ್ಥಿಕೆ ವಹಿಸಲು ನಾವು ಬಿಡುವುದಿಲ್ಲ

ಅಂತರ ರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾದವ್ ಪ್ರಕರಣ ಇತ್ಯರ್ಥವಾಗುವವರೆಗೆ ಆತನಿಗೆ ಶಿಕ್ಷೆ ವಿಧಿಸಲಾಗುವುದಿಲ್ಲ.

ಚೀನಾ
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.

ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡಲು ಇರುವ ನೀತಿ ನಮ್ಮದಲ್ಲ . ನಾವು ಎಲ್ಲರೊಂದಿಗೆ ಬೆರೆಯಲು ನೋಡುತ್ತೇವೆ.

ಒಪ್ಪಂದ ಉಲ್ಲಂಘಿಸಿ ಶಸ್ತ್ರಾಸ್ತ್ರಗಳೊಂದಿಗೆ ಚೀನಾ ಪಡೆಗಳು ಇತ್ತೀಚೆಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಗಡಿ ಪ್ರವೇಶಿಸಿರುವ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ.

ಜಾಗತಿಕ ಸಮಸ್ಯೆ ಬಗ್ಗೆ
ಪ್ಯಾರಿಸ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದು ಯಾವುದೇ ಒತ್ತಡಕ್ಕೆ ಮಣಿದು ಅಲ್ಲ.

ಅಮೆರಿಕ ಒಪ್ಪುತ್ತದೋ ಬಿಡುತ್ತದೋ ಗೊತ್ತಿಲ್ಲ, ಆದರೆ ನಾವು ಪ್ಯಾರಿಸ್ ಒಪ್ಪಂದಕ್ಕೆ ಬದ್ಧರಾಗಿದ್ದೇವೆ.

ಗಲ್ಫ್ ಜತೆಗಿರುವ ರಾಜತಾಂತ್ರಿಕ ವಿರಸ ಕತ್ತಾರ್ ಜತೆಗಿನ ನಮ್ಮ ಸಂಬಂಧ ಮತ್ತು ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry