ಕ್ರಿಕೆಟ್‌ ಪಂದ್ಯಾವಳಿ: ಗೆದ್ದ ತಂಡಕ್ಕೆ ಸಿಕ್ಕ ಬಹುಮಾನ ‘ಹಸು’

7

ಕ್ರಿಕೆಟ್‌ ಪಂದ್ಯಾವಳಿ: ಗೆದ್ದ ತಂಡಕ್ಕೆ ಸಿಕ್ಕ ಬಹುಮಾನ ‘ಹಸು’

Published:
Updated:
ಕ್ರಿಕೆಟ್‌ ಪಂದ್ಯಾವಳಿ: ಗೆದ್ದ ತಂಡಕ್ಕೆ ಸಿಕ್ಕ ಬಹುಮಾನ ‘ಹಸು’

ವಡೋದರ: ಇಲ್ಲಿನ ರಾಬ್ರಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಗೆದ್ದ ತಂಡಕ್ಕೆ ಹಸುವನ್ನು ಬಹುಮಾನವಾಗಿ ನೀಡಿದ ಪ್ರಸಂಗ ನಡೆದಿದೆ.

ಪಂದ್ಯಾವಳಿಯ ಆಯೋಜಕರು ಪ್ರಾಣಿಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು ಎಂದು ಹೇಳಲಾಗುತ್ತಿದ್ದು, ಸದ್ಯ ದೇಶದಾದ್ಯಂತ ‘ಗೋಮಾಂಸ ನಿಷೇಧ’ದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಇಂತಹದೊಂದು ಘಟನೆ ನಡೆದಿರುವುದು ಎಲ್ಲರ ಗಮನ ಸೆಳೆದಿದೆ.

ಈ ಸಮುದಾಯದ ಜನ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರು ಸಹ ಜಾನುವಾರುಗಳೊಂದಿಗೆ ಅತಿಯಾದ ಅವಲಂಬನೆ ಮತ್ತು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹಾಗಾಗಿ ಕೆಲವು ವರ್ಷಗಳಿಂದ ಪ್ರಾಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ವಿಶೇಷ ಮಾರ್ಗವನ್ನು ಅನುಸರಿಸುತ್ತಿದ್ದು, ಸರಣಿಯ ವೇಳೆ ಹಸುವನ್ನು ಪಂದ್ಯ ಶ್ರೇಷ್ಟರಾದವರಿಗೆ ನೀಡಲಾಗುತ್ತಿದೆ.

‘ಈ ಪಂದ್ಯಾವಳಿಯ ಮೂಲಕ ನಾವು ‘ಹಸು’ ಸಮಾಜದಲ್ಲಿ ಅತಿ ಮುಖ್ಯವಾದ ಭಾಗ ಎನ್ನುವ ಸಂದೇಶವನ್ನು ಸಾರುತ್ತಿದ್ದೇವೆ. ರಾಬ್ರಿ ಸಮುದಾಯ ಹಸುವಿನ ರಕ್ಷಣೆಗಾಗಿ ಶ್ರಮಿಸುತ್ತಿದ್ದು, ಹಸುಗಳು ನಮ್ಮ ಜೀವನ ನಿರ್ವಹಣೆಗೆ ಮಹತ್ವದ ಕೊಡುಗೆ ನೀಡುತ್ತಿವೆ’ ಎಂದು ಪಂದ್ಯಾವಳಿಯ ಆಯೋಜಕ ಪ್ರಕಾಶ್‌ ರಾಬ್ರಿ ತಿಳಿಸಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಯಾಗಿ ಹಸುವನ್ನು ಪಡೆದ ರಾಜು ರಾಬ್ರಿ, ‘ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕೆಂದು ನಾವು ಬಯಸುತ್ತೇವೆ. ಆಗ ಮಾತ್ರವೇ ನಾವು ಅವುಗಳನ್ನು ರಕ್ಷಿಸಲು ಸಾಧ್ಯ’ ಎಂದು ಹೇಳಿದ್ದಾರೆ.

ಈ ಮೂಲಕ ಗೋವಿನ ಮಹತ್ವವನ್ನು ರಾಷ್ಟ್ರದಾದ್ಯಂತ ಇರುವ ಜನರಿಗೆ ಸಾರುವ ಪ್ರಯತ್ನವನ್ನು ರಾಬ್ರಿ ಸಮುದಾಯ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry