‘ಕಾಮಿಡಿ ಕುಟುಂಬ’ಕ್ಕೆ ಜಗ್ಗೇಶ್‌ ಯಜಮಾನ!

7

‘ಕಾಮಿಡಿ ಕುಟುಂಬ’ಕ್ಕೆ ಜಗ್ಗೇಶ್‌ ಯಜಮಾನ!

Published:
Updated:
‘ಕಾಮಿಡಿ ಕುಟುಂಬ’ಕ್ಕೆ ಜಗ್ಗೇಶ್‌ ಯಜಮಾನ!

ಜೀ ಕನ್ನಡ ವಾಹಿನಿಯು, ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಅಂತಿಮ ಹಂತಕ್ಕೆ ಬಂದಿದ್ದ ಹತ್ತು ಜನ ಕಲಾವಿದರನ್ನು ಇಟ್ಟುಕೊಂಡು ಇನ್ನೊಂದು ಹಾಸ್ಯ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಹೆಸರು ‘ಕಿಲಾಡಿ ಕುಟುಂಬ.’

‘ಕಾಮಿಡಿ ಕಿಲಾಡಿಗಳು’ ಕಲಾವಿದರ ಜತೆಗೆ ‘ಡ್ರಾಮಾ ಜ್ಯೂನಿಯರ್ಸ್’, ‘ಲಿಟ್ಲ್ ಚಾಂಪಿಯನ್ಸ್’, ‘ಸರಿಗಮಪ’ ರಿಯಾಲಿಟಿ ಷೋದ ಸದಸ್ಯರೂ ಈ ಕುಟುಂಬದಲ್ಲಿ ಪಾಲು ಪಡೆಯಲಿದ್ದಾರೆ.

ಜೂನ್‌ 12ರಂದು (ಸೋಮವಾರ) ರಿಯಾಲಿಟಿ ಷೋ ಆರಂಭವಾಗಲಿದೆ. ನವರಸನಾಯಕ ಜಗ್ಗೇಶ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30 ರವರೆಗೆ ‘ಕಿಲಾಡಿ ಕುಟುಂಬ’ ಪ್ರಸಾರವಾಗಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry