ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆನ್‌ ನೆನಪಲ್ಲಿ ಸಾಂಸ್ಕೃತಿಕ ಉತ್ಸವ

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಡಾ.ಎಚ್. ನರಸಿಂಹಯ್ಯನವರು (ಎಚ್ಚೆನ್) ಶೈಕ್ಷಣಿಕ ಮುತ್ಸದ್ದಿ, ವಿಜ್ಞಾನಿ ಹಾಗೂ ಸಮಾಜ ಸುಧಾರಕರಾಗಿ ಮನೆ ಮಾತಾದವರು. ನ್ಯಾಷನಲ್ ಎಜುಕೇಷನ್‌ ಸೊಸೈಟಿಯೊಂದಿಗೆ ಅವರದ್ದು ಅವಿನಾಭಾವ ನಂಟು.

1917ರಲ್ಲಿ ನ್ಯಾಷನಲ್ ಹೈಸ್ಕೂಲ್, 1945ರಲ್ಲಿ ನ್ಯಾಷನಲ್‌ ಕಾಲೇಜು ಆರಂಭವಾಯಿತು. 1963ರಲ್ಲಿ ಜಯನಗರ ಶಾಖೆಯೂ ಆರಂಭವಾಯಿತು. ಈ ಎಲ್ಲಾ ಶಿಕ್ಷಣ ಸಂಸ್ಥೆಗಳೂ ನಗರದ ಪ್ರತಿಷ್ಠಿತ ಕಾಲೇಜಾಗಿ ಬೆಳೆಯಲು ಎಚ್ಚೆನ್‌ ಅವರ ಮಾರ್ಗದರ್ಶನ ಮಹತ್ವದ್ದು.

ನ್ಯಾಷನಲ್ ಎಜುಕೇಷನ್ ಸೊಸೈಟಿ 1992ರಲ್ಲಿ ಸ್ಥಾಪಿಸಿದ ಬೆಂಗಳೂರು ಲಲಿತಕಲಾ ಪರಿಷತ್‌ನ ಮೊದಲ ಅಧ್ಯಕ್ಷರೂ ನರಸಿಂಹಯ್ಯನವರೇ. 2005ರಿಂದ ಡಾ. ಎ.ಎಚ್. ರಾಮರಾವ್  ಅವರು ಪರಿಷತ್‌ ಅಧ್ಯಕ್ಷರಾಗಿದ್ದಾರೆ. ರಾಮರಾವ್‌– ಸುಧಾ ಆರ್. ರಾವ್ ದಂಪತಿ ಆರಂಭಿಸಿದ ರಾಮಸುಧಾ ಚಾರಿಟೆಬಲ್ ಟ್ರಸ್ಟ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ.

ವಿಶೇಷವಾಗಿ, ಲಲಿತಕಲಾ ಪರಿಷತ್ತಿನಲ್ಲಿ ಪ್ರತಿವರ್ಷ ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವವನ್ನು ರಾಮಸುಧಾ ಚಾರಿಟೆಬಲ್ ಟ್ರಸ್ಟ್ ಪ್ರಾಯೋಜಿಸುತ್ತಾ ಬಂದಿದೆ.

ಈ ವರ್ಷದ ಸಾಂಸ್ಕೃತಿಕ ಉತ್ಸವ ಇದೇ ಮಂಗಳವಾರದಿಂದ ಶನಿವಾರದವರೆಗೆ (ಜೂನ್‌ 6–10) ನಡೆಯಲಿದೆ. ಈ ವರ್ಷದ ಸಾಂಸ್ಕೃತಿಕ ಉತ್ಸವ ಸಂಗೀತ, ನೃತ್ಯ, ನಾಟಕಗಳಿಂದ ಕೂಡಿರುತ್ತದೆ.

ರಾಮಕೃಷ್ಣನ್ ಮೂರ್ತಿ ಹಾಡುಗಾರಿಕೆ, ಆರ್.ಕೆ. ಶ್ರೀರಾಂ ಕುಮಾರ್ ಅವರು ತನಿ ಪಿಟೀಲು ನುಡಿಸಲಿದ್ದಾರೆ. ಯುವ ಪ್ರತಿಭೆ ಪಾವನಿ ಕಾಶೀನಾಥ್ ಕನ್ನಡ ಕೃತಿಗಳನ್ನು ಸಾದರಪಡಿಸಲಿದ್ದಾರೆ. ನಾಟ್ಯ ನಿಕೇತನದ ವಿದ್ಯಾರ್ಥಿನಿಯರು ಗುರು ರೇವತಿ ನರಸಿಂಹನ್ ಅವರ ನಿರ್ದೇಶನದಲ್ಲಿ ಭರತನಾಟ್ಯ ಪ್ರದರ್ಶನವಿದೆ. ಷೇಕ್ಸ್‌ಪಿಯರ್‌ನ ನಾಟಕದ ಅನುವಾದ ‘ನೀರು ಕುಡಿಸಿದ ನೀರೆಯರು’ ನಾಟಕವನ್ನು ಸಮಷ್ಟಿ ತಂಡ ಪ್ರಸ್ತುತಪಡಿಸಲಿದೆ.

ಎಂ.ಇ.ಎಸ್. ಶಿಕ್ಷಣ ಸಮೂಹದ ಅಧ್ಯಕ್ಷೆ ವಿಮಲಾ ರಂಗಾಚಾರ್ ಅವರು ಉತ್ಸವಕ್ಕೆ ಚಾಲನೆ ನೀಡುತ್ತಾರೆ. ಹಿರಿಯ ವಿಜ್ಞಾನಿ ಡಾ. ಪಿ. ಬಲರಾಂ  ಸಮಾರೋಪ ಭಾಷಣ ಮಾಡಲಿದ್ದಾರೆ. ಉಚಿತ ಪ್ರವೇಶ.
ಮಾಹಿತಿಗೆ: 94484 11153.

****
ಡಾ.ಎಚ್.ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ:  ಉದ್ಘಾಟನೆ– ವಿಮಲಾ ರಂಗಾಚಾರ್,  ‘ನೀರು ಕುಡಿಸಿದ ನೀರೆಯರು’ ನಾಟಕ ಪ್ರದರ್ಶನ. ನಿರ್ದೇಶನ– ಮಂಜುನಾಥ ಎಲ್‌.ಬಡಿಗೇರ್‌. ಆಯೋಜನೆ– ಬೆಂಗಳೂರು ಲಲಿತಕಲಾ ಪರಿಷತ್ತು, ರಾಮಸುಧಾ ಚಾರಿಟೇಬಲ್ ಟ್ರಸ್ಟ್. ಸ್ಥಳ– ಎಚ್ಚೆನ್‌ ಕಲಾಕ್ಷೇತ್ರ, ಜಯನಗರ ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT