ಸಲ್ಲೂ ಕರೆದಲ್ಲಿಗೆ ಕತ್ರಿನಾ ಹೋಗ್ತಾರಾ!

7

ಸಲ್ಲೂ ಕರೆದಲ್ಲಿಗೆ ಕತ್ರಿನಾ ಹೋಗ್ತಾರಾ!

Published:
Updated:
ಸಲ್ಲೂ ಕರೆದಲ್ಲಿಗೆ ಕತ್ರಿನಾ ಹೋಗ್ತಾರಾ!

ನಾನು ಕರೆದಲ್ಲಿಗೆ ಕತ್ರಿನಾ ಕೈಫ್‌  ಬರುತ್ತಾಳೆ ಎಂದು ಹೇಳಿಕೊಂಡಿದ್ದಾರೆ ಬಾಲಿವುಡ್‌ ನಟ ಸಲ್ಮಾನ್ ಖಾನ್.

ಹೀಗೆ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್, ಕತ್ರಿನಾ ಕಾಲೆಳೆಯುತ್ತಿದ್ದರೆ, ಆಕೆ ಮಾತ್ರ ನಗುತ್ತಿದ್ದಳಂತೆ.

‘ಇಷ್ಟೆಲ್ಲಾ ಕಾಲೆಳೆಯುವ ಸಲ್ಮಾನ್ ಜತೆ ನಟಿಸಲು ಕಷ್ಟವಾಗುತ್ತಾ’ ಎನ್ನುವ ಪ್ರಶ್ನೆಗೆ, ‘ಖಂಡಿತಾ ಇಲ್ಲಪ್ಪಾ, ಸಲ್ಲೂ ಜತೆ ಇರುವುದೆಂದರೆ ದಿನದ 24 ಗಂಟೆಯೂ ಮನರಂಜನೆ, ಟಿ.ವಿ.ಷೋ ನೋಡ್ತಾ ಇರೋ ಅನುಭವ ಕೊಡುತ್ತೆ. ಅವರ ಜತೆ ಇದ್ದರೆ ಯಾವಾಗಲೂ ಖುಷಿಯಾಗಿರಬಹುದು’ ಎಂದು ಕತ್ರಿನಾ ಉತ್ತರಿಸಿದ್ದಾಳೆ.

ತಮ್ಮ ಹಾಸ್ಯಪ್ರಜ್ಞೆಯ ಬಗ್ಗೆ ಮಾತನಾಡಿರುವ ಸಲ್ಮಾನ್, ‘ನಾನು ಮಾಡುವ ತಮಾಷೆ ಯಾವಾಗಲೂ ಸೊಂಟದ ಮೇಲೆ ಇರುತ್ತದೆ’ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry