ನಟನೆ ಜೊತೆ ಅಡುಗೆ ಸಖ್ಯ

7

ನಟನೆ ಜೊತೆ ಅಡುಗೆ ಸಖ್ಯ

Published:
Updated:
ನಟನೆ ಜೊತೆ ಅಡುಗೆ ಸಖ್ಯ

ಪುಲ್ಕಿತ್‌ ಸಾಮ್ರಾಟ್‌: ಅಮ್ಮ ಜೊತೆಗಿಲ್ಲ ಎಂಬ ಕಾರಣಕ್ಕೆ ಅಡುಗೆ ಮಾಡುವುದನ್ನು ಕಲಿತರು. ಸ್ವ ಆಸಕ್ತಿಯಿಂದ ವಿಭಿನ್ನ ಖಾದ್ಯಗಳನ್ನು ತಯಾರಿಸುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಕೇರಳ, ಜಪಾನಿ, ಚೈನೀಸ್‌ ಆಹಾರ ಚೆನ್ನಾಗಿ ಮಾಡುತ್ತಾರೆ. ದಾಲ್‌, ಹಲ್ವಾ ಇವರ ಇಷ್ಟದ ತಿನಿಸು. 

****

ಅಭಿಷೇಕ್‌ ಬಚ್ಚನ್‌: ‘ಫರ್‍ಹಾ ಕಿ ದವಾತ್‌’ ಅಡುಗೆ ಷೋನಲ್ಲಿ ಅಭಿಷೇಕ್‌ ಬಚ್ಚನ್ ಮಾಡಿದ ಖಾದ್ಯಕ್ಕೆ ಫರ್‍ಹಾ ಮೆಚ್ಚುಗೆ ಸೂಚಿಸಿದ್ದರು. ಇವರೊಬ್ಬ ಅದ್ಭುತ ಬಾಣಸಿಗ ಎಂಬುದು ತಿಳಿದಿದ್ದು ಆಗಲೇ. ದಹಿ ಚಿಕನ್‌ ಮಾಡುವುದರಲ್ಲಿ ನಿಸ್ಸೀಮರು. ಪತ್ನಿ ಐಶ್ವರ್ಯಾ ರೈಗೂ ಪತಿ ಮಾಡುವ ಅಡುಗೆ ಅಚ್ಚುಮೆಚ್ಚು. ಆದರೆ ಇವರಿಗಿಂತ ಐಶ್ವರ್ಯಾ ಚೆನ್ನಾಗಿ ಅಡುಗೆ ಮಾಡುತ್ತಾರಂತೆ. 

****

ಅಜಯ್‌ ದೇವಗನ್‌: ಬಿಡುವು ಸಿಕ್ಕಾಗಲೆಲ್ಲ ಸೌಟು ಹಿಡಿದು ಒಲೆಯ ಮುಂದೆ ಅಡುಗೆ ಮಾಡಲು ಅಣಿಯಾಗುತ್ತಾರೆ ಅಜಯ್‌. ಇವರು ಅಡುಗೆ ಕೌಶಲ ಕಲಿತಿದ್ದು ತಂದೆಯಿಂದ.   ಚೈನೀಸ್‌ ಮತ್ತು ಮುಘಲಾಯ್‌ ಅಡುಗೆ ಮಾಡುವುದರಲ್ಲಿ ಇವರದು ಎತ್ತಿದ ಕೈ. ಇವರು ಅಡುಗೆ ಮಾಡುತ್ತಿದ್ದಾರೆ ಎಂದರೆ ಕಾಜೋಲ್‌ ಅದನ್ನು ತಿನ್ನಲು ಕಾತರರಾಗಿರುತ್ತಾರಂತೆ. ಇವರು ಮಾಡುವ ಕಿಚಡಿ ಮಕ್ಕಳಿಗೆ ಬಲು ಇಷ್ಟವಂತೆ.

****

ಅರ್ಜುನ್‌ ಕಪೂರ್‌: ಬಿರಿಯಾನಿ ಮಾಡುವುದರಲ್ಲಿ ಪರಿಣಿತರು. ಇವರು ಅಡುಗೆ ಮಾಡುತ್ತಾರೆ ಎಂದರೆ ಮನೆಯಲ್ಲಿ ಹಬ್ಬದ ವಾತಾವರಣ. ಫೇಸ್‌ಬುಕ್‌ನಲ್ಲಿ ಹಲವು ಬಾರಿ ಇವರು ಮಾಡಿದ ಅಡುಗೆಯನ್ನು ಪೋಸ್ಟ್‌ ಮಾಡಿ ಅಭಿಮಾನಿಗಳ ಬಾಯಲ್ಲಿ ನೀರೂರಿಸಿದ್ದಾರೆ.

****

ಅಕ್ಷಯ್‌ಕುಮಾರ್‌: ಇವರು ರುಚಿಯಾಗಿ ಅಡುಗೆ ಮಾಡುತ್ತಾರೆ ಎಂಬುದು ತಿಳಿದಿರುವ ವಿಷಯವೇ. ಒಮ್ಮೆ ಇವರ ಅಡುಗೆ ರುಚಿ ಸವಿದವರು ಮತ್ತೊಮ್ಮೆ ಈ ಅವಕಾಶ ಯಾವಾಗ ಸಿಗುತ್ತದೆ ಎಂದು ಕಾತುರರಾಗಿತ್ತಾರೆ. ಅಷ್ಟು ಸೊಗಸಾಗಿ ಇವರು ಅಡುಗೆ ಮಾಡಬಲ್ಲರು. ಅಕ್ಷಯ್‌ ಸಮರ ಕಲೆ ಕಲಿತಿದ್ದು ಥಾಯ್ಲೆಂಡ್‌ನಲ್ಲಿ. ಅಲ್ಲಿನ ಅಡುಗೆ ಮಾಡುವುದರಲ್ಲಿಯೂ ಅವರು ಪರಿಣಿತರು. ಗ್ರೀನ್‌ ಕರ್ರಿ, ಜಪಾನಿನ ಸುಶಿ, ಸಾಸಿಮಿ.. ಹೀಗೆ ಹಲವು ಖಾದ್ಯಗಳನ್ನು ಅಚ್ಚುಕಟ್ಟಾಗಿ ಮಾಡಬಲ್ಲರು.

****

ಇಮ್ರಾನ್‌ ಖಾನ್‌: ಬಾಲಿವುಡ್‌ನ ಚಾಕೊಲೆಟ್‌ ಹೀರೊ ನಟ ಎನಿಸಿರುವ ಇಮ್ರಾನ್‌ ಸಮಯ ಸಿಕ್ಕಾಗಲೆಲ್ಲ ಅಡುಗೆ ಮನೆ ಸೇರುತ್ತಾರೆ. ಇವರ ಅಡುಗೆಯ ರುಚಿ ಪತ್ನಿಗೂ ಪ್ರಿಯವಂತೆ. ಯಾವುದೇ ತರಹದ ಅಡುಗೆಯಾದರೂ ಅದು ಸ್ಪೈಸಿ ಆಗಿದ್ದರೆ ಇವರಿಗೆ ಇಷ್ಟ. ಇತ್ತೀಚೆಗಷ್ಟೇ ಇವರು ಮಾಡಿದ್ದ ಕರ್ರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry