ದೀಪಿಕಾ ಪಡುಕೋಣೆ ಪೋಸ್ಟ್‌ಗೆ ರಣವೀರ್‌ ಸಿಂಗ್‌ ‘ಮಿಸ್ಸಿಂಗ್‌ ಯಾ’ ಕಮೆಂಟ್‌; ಕಡಿದಿಲ್ಲ ಬಾಲಿವುಡ್‌ ಜೋಡಿಯ ಪ್ರೇಮ?

7

ದೀಪಿಕಾ ಪಡುಕೋಣೆ ಪೋಸ್ಟ್‌ಗೆ ರಣವೀರ್‌ ಸಿಂಗ್‌ ‘ಮಿಸ್ಸಿಂಗ್‌ ಯಾ’ ಕಮೆಂಟ್‌; ಕಡಿದಿಲ್ಲ ಬಾಲಿವುಡ್‌ ಜೋಡಿಯ ಪ್ರೇಮ?

Published:
Updated:
ದೀಪಿಕಾ ಪಡುಕೋಣೆ ಪೋಸ್ಟ್‌ಗೆ ರಣವೀರ್‌ ಸಿಂಗ್‌ ‘ಮಿಸ್ಸಿಂಗ್‌ ಯಾ’ ಕಮೆಂಟ್‌; ಕಡಿದಿಲ್ಲ ಬಾಲಿವುಡ್‌ ಜೋಡಿಯ ಪ್ರೇಮ?

ಮುಂಬೈ: ಬಾಲಿವುಡ್‌ನ ಜನಪ್ರಿಯ ಸಿನಿ ಜೋಡಿ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನಡುವೆ ಪ್ರೇಮ ಸಂಬಂಧ ಉಳಿದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಒಂದಷ್ಟು ದಿನ ಜೊತೆಯಾಗಿ ಸುತ್ತಾಡಿ ಮದುವೆಯ ಗಾಸಿಪ್‌ ಹುಟ್ಟುಹಾಕಿದ್ದ ಈ ಜೋಡಿ ಆಮೇಲೇಕೋ ದೂರವಾಗಿತ್ತು.

ಇದೀಗ ಈ ಇಬ್ಬರ ಮಧ್ಯೆ ಪ್ರೇಮ ಮತ್ತೆ ಚಿಗುರಿರುವ ಲಕ್ಷಣಗಳು ಕಾಣುತ್ತಿವೆ! ಚಾಂಪಿಯನ್ಸ್‌ ಲೀಗ್‌ ಟ್ರೋಫಿಗೆ ಮುತ್ತಿಡುತ್ತಿರುವ ಚಿತ್ರವನ್ನು ದೀಪಿಕಾ ಇನ್ಸ್ಟಾಗ್ರಾಮ್‌ನಲ್ಲಿ ಭಾನುವಾರ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗೆ ರಣವೀರ್‌ ‘ಮಿಸ್ಸಿಂಗ್‌ ಯಾ’ (Missin Ya) ಎಂದು ಕಮೆಂಟಿಸಿ ಮುತ್ತಿಡುವ ಸ್ಮೈಲಿ ಹಾಕಿದ್ದಾರೆ.‘ಇವರಿಬ್ಬರ ಮಧ್ಯೆ ಇನ್ನೂ ಪ್ರೇಮ ಸಂಬಂಧ ಉಳಿದಿದೆ ಎಂಬುದಕ್ಕೆ ಈ ಕಮೆಂಟ್‌ ಸಾಕ್ಷಿ’ ಎಂದು ಬಾಲಿವುಡ್‌ ಸಿನಿ ತಜ್ಞರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.

‘ರಾಮ್‌ಲಿಲಾ’ ಚಿತ್ರದ ಬಳಿಕ ಈ ಜೋಡಿ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅಂದಹಾಗೆ ದೀಪಿಕಾ ಪೋಸ್ಟ್ ಮಾಡಿರುವ ಈ ಚಿತ್ರಕ್ಕೆ 6 ಲಕ್ಷ 78 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಒತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry