ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಟಾಪರ್‌ ನಂದಿನಿ ಪಡೆದ ಅಂಕ ಶೇ 55.3

7
ಕಳೆದ ವರ್ಷ ಟೀನಾ ಡಾಬಿ ಪಡೆದಿದ್ದು ಶೇ 52.49

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಟಾಪರ್‌ ನಂದಿನಿ ಪಡೆದ ಅಂಕ ಶೇ 55.3

Published:
Updated:
ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಟಾಪರ್‌ ನಂದಿನಿ ಪಡೆದ ಅಂಕ ಶೇ 55.3

ನವದೆಹಲಿ: 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ(ಸಿಎಸ್‌ಇ)ಯಲ್ಲಿ ಮೊದಲ ರ‍್ಯಾಂಕ್‌ ಪಡೆದಿರುವ ಕೋಲಾರ ಜಿಲ್ಲೆಯ ಕೆ.ಆರ್‌. ನಂದಿನಿ ಗಳಿಸಿರುವ ಒಟ್ಟು ಅಂಕ ಶೇ 55.3!

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟಿಸಿದ್ದು, ಮೊದಲ ಸ್ಥಾನದಲ್ಲಿರುವ ಹಾಗೂ ಕಂದಾಯ ಸೇವಾ ಅಧಿಕಾರಿಯಾಗಿರುವ (ಕಸ್ಟಮ್ಸ್‌ ಮತ್ತು ಕೇಂದ್ರೀಯ ಅಬಕಾರಿ) ನಂದಿನಿ ಮುಖ್ಯ ಪರೀಕ್ಷೆಯಲ್ಲಿ 927 ಹಾಗೂ ವ್ಯಕ್ತಿತ್ವ ಪರೀಕ್ಷೆಯಲ್ಲಿ 193 ಸೇರಿದಂತೆ ಒಟ್ಟು 1,120 (ಶೇ 55.3) ಅಂಕ ಪಡೆದಿದ್ದಾರೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಸೇರಿದಂತೆ ದೇಶದ ಉನ್ನತ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಯುಪಿಎಸ್‌ಸಿ ಮೂರು ಹಂತಗಳಲ್ಲಿ 2,025 ಅಂಕಗಳ ಪರೀಕ್ಷೆ ನಡೆಸುತ್ತಿದೆ.

ಕಳೆದ ವರ್ಷದ ನಾಗರಿಕ ಸೇವಾ ಪರೀಕ್ಷೆ ಟಾಪರ್‌ ಟೀನಾ ಡಾಬಿ 1,063(ಶೇ 52.49) ಅಂಕ ಪಡೆದಿದ್ದರು.

ಸಾಮಾನ್ಯ ವರ್ಗದ 500, ಇತರೆ ಹಿಂದುಳಿದ ವರ್ಗಗಳ 347, 163 ಎಸ್‌ಸಿ ಹಾಗೂ 89 ಎಸ್‌ಟಿ ಸೇರಿದಂತೆ ಒಟ್ಟು 1,099 (ಪುರುಷ:846, ಮಹಿಳೆ:253) ಅಭ್ಯರ್ಥಿಗಳನ್ನು ದೇಶದ ಉನ್ನತ ಸೇವೆಗಳಿಗೆ ಆಯ್ಕೆ ಮಾಡಲಾಗಿದೆ.

* ಕೆ.ಆರ್‌. ನಂದಿನಿ–ಮೊದಲ ರ‍್ಯಾಂಕ್‌ – 1,120 (ಶೇ 55.3) ಅಂಕ

* ಅನ್ಮೋಲ್‌ ಷೇರ್‌ ಸಿಂಗ್‌ ಬೇಡಿ– 2ನೇ ರ‍್ಯಾಂಕ್‌ – 1,105 (ಶೇ 54.56) ಅಂಕ

* ಗೋಪಾಲಕೃಷ್ಣ ರೋಣನ್ಕಿ– 3ನೇ ರ‍್ಯಾಂಕ್‌ – 1,101(ಶೇ 54.37)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry