ಮೋಸುಲ್‌ನ 1 ಲಕ್ಷ ಮಕ್ಕಳು ಆತಂಕದಲ್ಲಿ: ಯುನಿಸೆಫ್‌

7

ಮೋಸುಲ್‌ನ 1 ಲಕ್ಷ ಮಕ್ಕಳು ಆತಂಕದಲ್ಲಿ: ಯುನಿಸೆಫ್‌

Published:
Updated:
ಮೋಸುಲ್‌ನ 1 ಲಕ್ಷ ಮಕ್ಕಳು ಆತಂಕದಲ್ಲಿ: ಯುನಿಸೆಫ್‌

ಬಾಗ್ದಾದ್‌: ಅಮೆರಿಕ ಬೆಂಬಲಿತ ಸರ್ಕಾರಿ ಪಡೆ ಮತ್ತು ಐಎಸ್‌ ಉಗ್ರರ ನಡುವೆ ಮೋಸುಲ್‌ನಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ 1 ಲಕ್ಷ ಮಕ್ಕಳು   ಅಪಾಯಕ್ಕೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಮಿತಿ ಹೇಳಿದೆ.

ಯುದ್ಧದಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ನಾಗರಿಕರು ಮೃತಪಟ್ಟಿರುವುದಾಗಿ ವರದಿಗಳು ಬಂದಿವೆ ಎಂದು ಇರಾಕ್‌ನಲ್ಲಿ  ಯುನಿಸೆಫ್‌ನ ಪ್ರತಿನಿಧಿ ಪೀಟರ್‌ ಹಾಕಿನ್ಸ್‌  ಹೇಳಿದ್ದಾರೆ.

ಅಪಾಯಕಾರಿ ಸ್ಥಿತಿಯಿಂದ ಮಕ್ಕಳನ್ನು ರಕ್ಷಿಸಲು  ಪ್ರಯತ್ನಿಸುವಂತೆ ಯುದ್ಧನಿರತರಿಗೆ ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry