ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ಏರುಗತಿ

Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ತಜ್ಞರ ನಿರೀಕ್ಷೆಯಂತೆಯೇ ಸದ್ಯ,  ಜಿಎಸ್‌ಟಿಗೆ ಸಂಬಂಧಿಸಿದ ಸುದ್ದಿಗಳು ದೇಶದ ಷೇರುಪೇಟೆಗಳ ಮೇಲೆ  ಪ್ರಭಾವ ಬೀರುತ್ತಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್ಇ) 36 ಅಂಶ ಏರಿಕೆ ಕಂಡು, 31,309 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿದೆ. ದಿನದ ವಹಿವಾಟಿನಲ್ಲಿ  ಸಾರ್ವಕಾಲಿಕ ಗರಿಷ್ಠ ಮಟ್ಟವಾದ 31,355 ಮತ್ತು ಕನಿಷ್ಠ ಮಟ್ಟವಾದ 31,198 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 22 ಅಂಶ ಏರಿಕೆ ಕಂಡು, 9,675 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನಲ್ಲಿ  ಹೊಸ ಗರಿಷ್ಠ ಮಟ್ಟವಾದ 9,687 ಮತ್ತು ಕನಿಷ್ಠ 9,641 ಅಂಶಗಳನ್ನು ತಲುಪಿತ್ತು.

ಜಾಗತಿಕ ಮಟ್ಟದಲ್ಲಿಯೂ ಷೇರುಪೇಟೆಗಳು ಏರಿಳಿತ ಕಾಣುತ್ತಿವೆ. ಹೀಗಿದ್ದರೂ ಜಿಎಸ್‌ಟಿ ಪ್ರಭಾವ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ. ಆದರೆ, ಮಂಗಳವಾರ ಮತ್ತು ಬುಧವಾರ ಆರ್‌ಬಿಐನ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ. ಹೀಗಾಗಿ ಹೂಡಿಕೆದಾರರು ಸ್ವಲ್ಪ ಎಚ್ಚರಿಕೆಯಿಂದ ವಹಿವಾಟು ನಡೆಸಿದರು. ಇದರ ಜತೆಗೆ  ಲೋಹ, ವಿದ್ಯುತ್‌ ವಲಯಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾದವು. ಇದರಿಂದ ಸೂಚ್ಯಂಕಗಳು ಹೆಚ್ಚು ಏರಿಕೆ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT