ಟೆನಿಸ್: ರಾಮ್‌ಕುಮಾರ್‌ಗೆ ಪ್ರಶಸ್ತಿ

7

ಟೆನಿಸ್: ರಾಮ್‌ಕುಮಾರ್‌ಗೆ ಪ್ರಶಸ್ತಿ

Published:
Updated:
ಟೆನಿಸ್: ರಾಮ್‌ಕುಮಾರ್‌ಗೆ ಪ್ರಶಸ್ತಿ

ಸಿಂಗಪುರ: ಭಾರತದ ರಾಮ್‌ಕುಮಾರ್ ರಾಮನಾಥನ್ ಇಲ್ಲಿ ನಡೆದ ಐಟಿಎಫ್ ಪುರುಷರ ಫ್ಯೂಚರ್ಸ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಭಾರತದ ಆಟಗಾರ 6–2, 6–2ರಲ್ಲಿ  ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಅಮೆರಿಕದ ರೆಮಂಡ್ ಸರ್ಮಿಯೆಂಟೊ ಅವರನ್ನು ಮಣಿಸಿದರು. ವೃತ್ತಿಜೀವನದಲ್ಲಿ 15 ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಭಾರತದ ಆಟಗಾರ ಈ ಋತುವಿನಲ್ಲಿ ಮೊದಲ ಬಾರಿ ಚಾಂಪಿಯನ್ ಆಗುವ ಮೂಲಕ ಶುಭಾರಂಭ ಮಾಡಿದ್ದಾರೆ.

ಡೇವಿಸ್ ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ರಾಮ್‌ಕುಮಾರ್ ಇತ್ತೀಚೆಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲೇ ಸೋಲು ಕಂಡು ಹೊರಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry