ಟೇಬಲ್ ಟೆನಿಸ್ ಲೀಗ್‌ನಲ್ಲಿ ಶರತ್‌, ಮಾಣಿಕಾ ಸ್ಪರ್ಧೆ

7

ಟೇಬಲ್ ಟೆನಿಸ್ ಲೀಗ್‌ನಲ್ಲಿ ಶರತ್‌, ಮಾಣಿಕಾ ಸ್ಪರ್ಧೆ

Published:
Updated:
ಟೇಬಲ್ ಟೆನಿಸ್ ಲೀಗ್‌ನಲ್ಲಿ ಶರತ್‌, ಮಾಣಿಕಾ ಸ್ಪರ್ಧೆ

ಮುಂಬೈ: ಭಾರತದ ಅಚಂತಾ ಶರತ್‌ ಕಮಲ್‌ ಹಾಗೂ ಮಾಣಿಕಾ ಬಾತ್ರಾ ಮೊದಲ ಟೇಬಲ್ ಟೆನಿಸ್ ಲೀಗ್‌ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಜುಲೈ 13ರಿಂದ ಲೀಗ್ ಆರಂಭವಾಗಲಿದೆ. ಭಾರತದ 12 ಮಹಿಳಾ ಹಾಗೂ ಪುರುಷ ಸ್ಪರ್ಧಿಗಳು ಸೇರಿದಂತೆ ಒಟ್ಟು 48 ಆಟಗಾರರು ಇಲ್ಲಿ ಕಣಕ್ಕಿಳಿಯಲಿದ್ದಾರೆ.

ಪುರುಷರ ವಿಭಾಗದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಹಾಂಕಾಂಗ್‌ನ ವಾಂಗ್ ಚುನ್ ತಿಂಗ್‌ ಹಾಗೂ ಮಹಿಳೆಯರ ವಿಭಾಗದ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಜರ್ಮನಿಯ ಹಾನ್ ಯಿಂಗ್‌ ಕೂಡ ಸ್ಪರ್ಧಿಸಲಿದ್ದಾರೆ.

ವಾಂಗ್‌ ಹೋದ ವರ್ಷದ ವಿಶ್ವಕಪ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು. ಚೆನ್ನೈ, ನವದೆಹಲಿ ಹಾಗೂ ಮುಂಬೈ ನಲ್ಲಿ ಪಂದ್ಯಗಳು ನಡೆಯಲಿವೆ. ಪ್ರತೀ ತಂಡದಲ್ಲಿ ಎಂಟು ಆಟಗಾರರು ಇರಲಿದ್ದಾರೆ. ಹದಿನೈದು ಲೀಗ್ ಪಂದ್ಯಗಳು ಇರಲಿವೆ.

ಪ್ರತೀ ಪಂದ್ಯದಲ್ಲಿ ಒಂಬತ್ತು ಸ್ಪರ್ಧೆಗಳು ಮೂರು ಗೇಮ್‌ಗಳ ಮಾದರಿಯಲ್ಲಿ ನಡೆಯಲಿವೆ. ಲೀಗ್ ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಮೊದಲ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಚಾಂಪಿಯನ್ ತಂಡಕ್ಕೆ ₹1ಕೋಟಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್ಸ್ ಅಪ್ ತಂಡ ₹75ಲಕ್ಷ ಪಡೆದು ಕೊಳ್ಳಲಿದೆ, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ ₹50 ಮತ್ತು ₹25ಲಕ್ಷ ಹಣ ಪಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry