ಕತಾರ್‌ಗೆ ಅರಬ್‌ ದೇಶಗಳ ಬಹಿಷ್ಕಾರ

7

ಕತಾರ್‌ಗೆ ಅರಬ್‌ ದೇಶಗಳ ಬಹಿಷ್ಕಾರ

Published:
Updated:
ಕತಾರ್‌ಗೆ ಅರಬ್‌ ದೇಶಗಳ ಬಹಿಷ್ಕಾರ

ದುಬೈ: ಅರಬ್‌ ದೇಶಗಳ ನಡುವಣ ಸಂಬಂಧದಲ್ಲಿ ಮತ್ತೆ ಬಿರುಕು ಮೂಡಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೀಡುತ್ತಿರುವ ನೆರವು ಹಾಗೂ ಇರಾನ್ ಜೊತೆಗಿನ ಬಾಂಧವ್ಯವನ್ನು ಖಂಡಿಸಿ ಕತಾರ್ ಜತೆ ಆರು ದೇಶಗಳು ಸಂಬಂಧ ಕಡಿದುಕೊಂಡಿವೆ.

ಈಜಿಪ್ಟ್, ಬಹರೇನ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಒಕ್ಕೂಟ (ಯುಎಇ), ಯೆಮನ್‌ ಅಲ್ಲದೆ ಮಾಲ್ಡೀವ್ಸ್‌  ದೇಶಗಳು ಕತಾರ್‌ ಜತೆ ಸಂಬಂಧ ಕಡಿದುಕೊಂಡಿದ್ದು, ತಮ್ಮ ದೇಶದಿಂದ ಕತಾರ್‌ ರಾಜತಾಂತ್ರಿಕ ಸಿಬ್ಬಂದಿಯನ್ನು ಹಿಂದಕ್ಕೆ ಕಳುಹಿಸುವ ನಿರ್ಧಾರವನ್ನೂ ತೆಗೆದುಕೊಂಡಿವೆ.

ಯುದ್ಧಪೀಡಿತ ಯೆಮನ್‌ನಲ್ಲಿರುವ ಕತಾರ್ ಸೇನೆಯನ್ನು ವಾಪಸ್ ಕಳುಹಿಸುವುದಾಗಿ ಸೌದಿ ಹೇಳಿದೆ.

ಕತಾರ್ ಜತೆಗಿನ ವೈಮಾನಿಕ ಹಾಗೂ ಸಮುದ್ರ ಮಾರ್ಗದ ಸಂಚಾರ ಸ್ಥಗಿತಗೊಳಿಸಲು ಸಹ ಈ ದೇಶಗಳು ಉದ್ದೇಶಿಸಿವೆ. ಕತಾರ್ ಜತೆಗಿನ ಭೂಗಡಿಯನ್ನು ಮುಚ್ಚುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ. ಇದು ಅರೇಬಿಯನ್ ಪರ್ಯಾಯ ದ್ವೀಪದ ಜತೆಗಿನ ಭೂಸಂಪರ್ಕವನ್ನು ಕಡಿತಗೊಳಿಸಲಿದೆ.

ಸೌದಿ ವಾಯುಪ್ರದೇಶದ ಮೂಲಕ ನಿತ್ಯವೂ ಹಾರಾಟ ನಡೆಸುವ ಕತಾರ್‌ನ ದೊಡ್ಡ ವೈಮಾನಿಕ ಸಂಸ್ಥೆ ಕತಾರ್ ಏರ್‌ವೇಸ್ ಮೇಲೆ ಸೌದಿಯ ನಿರ್ಧಾರ ಯಾವ ಪರಿಣಾಮ ಬೀರಲಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

‘ರಾಜಕೀಯ ಸಂಚು’

ಸಂಬಂಧ ಕಡಿತ ನಿರ್ಧಾರ ನ್ಯಾಯೋಚಿತವಲ್ಲ ಎಂದು ಕತಾರ್  ಹೇಳಿದೆ. ದೇಶದ ಮೇಲೆ ರಾಜಕೀಯ ಪ್ರಭುತ್ವ ಸ್ಥಾಪಿಸಲು ನಡೆಸಿರುವ ಸಂಚಿದು ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry