ರಾಜ್ಯದ ನೀತಿಗಳ ನಿರ್ದೇಶಕ ತತ್ವಗಳು ಯಾವುವು?

7

ರಾಜ್ಯದ ನೀತಿಗಳ ನಿರ್ದೇಶಕ ತತ್ವಗಳು ಯಾವುವು?

Published:
Updated:
ರಾಜ್ಯದ ನೀತಿಗಳ ನಿರ್ದೇಶಕ ತತ್ವಗಳು ಯಾವುವು?

ಮೂಲಭೂತ ಹಕ್ಕುಗಳನ್ನಲ್ಲದೇ ಭಾರತೀಯರಿಗೆ ಇನ್ನೂ ಕೆಲವು ಹಕ್ಕುಗಳನ್ನು ನೀಡಲಾಗಿದ್ದು ಅವುಗಳನ್ನು 36 ರಿಂದ 51ನೇ ವಿಧಿಗಳಲ್ಲಿ ವಿವರಿಸಲಾಗಿದೆ. ಇವುಗಳಿಗೆ ನಿರ್ದೇಶಕ ತತ್ವಗಳು ಎನ್ನಲಾಗುತ್ತದೆ.

ಇದರ ಅಡಿಯಲ್ಲಿ ಬರುವ ಹಕ್ಕುಗಳೆಂದರೆ - ದುಡಿಯುವ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು, ಸಮರ್ಪಕವಾದ ಜೀವನಶೈಲಿಯ ಹಕ್ಕು, 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ವಿದ್ಯಾಭ್ಯಾಸದ ಹಕ್ಕು ಮುಂತಾದವು. ಸರ್ಕಾರವು ಕೂಲಿ ಕೆಲಸ ಮಾಡುವವರ ಹಿತಾಸಕ್ತಿ ಕಾಪಾಡಬೇಕು. ಮಕ್ಕಳು ಆರೋಗ್ಯಕ್ಕೆ ಹಾನಿ ತರುವಂತಹ ಕೆಲಸದಲ್ಲಿ ತೊಡಗದಂತೆ ಕ್ರಮ ಕೈಗೊಳ್ಳಬೇಕು.

ಸರ್ಕಾರ, ದುರ್ಬಲ ವರ್ಗಗಳಿಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕ ಲಾಭಗಳು ದೊರಕುವಂತೆ ಮಾಡಬೇಕು. ರಾಷ್ಟ್ರೀಯ ಮಹತ್ವ ಇರುವ ಸ್ಮಾರಕ, ಸ್ಥಳ ಮತ್ತು ವಸ್ತುಗಳನ್ನು ರಕ್ಷಿಸಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡಬೇಕು. ಗ್ರಾಮ ಪಂಚಾಯಿತಿಗಳನ್ನು ಸಂಘಟಿಸಬೇಕು. ಪರಿಸರ ರಕ್ಷಣೆ ಮಾಡಬೇಕು. ಆರು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಪಾಲನೆ ಮತ್ತು ಅವರಿಗೆ ಶಿಕ್ಷಣ ಒದಗಿಸಲು ಸರ್ಕಾರ ಪ್ರಯತ್ನಿಸಬೇಕು... ಇತ್ಯಾದಿ ಅಂಶಗಳು ಇದರಲ್ಲಿ ಇವೆ. (ಇದರಲ್ಲಿ ‘ಆರೋಗ್ಯದ ಹಕ್ಕು’ ಕೂಡ ಇದ್ದು ಅದನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸಲಾಗುವುದು).

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry