ಅನ್ಯರಿಂದ ಅವಂತಿಕಾ ಧ್ವನಿ ಮುದ್ರಣಕ್ಕೆ ತಡೆ

7

ಅನ್ಯರಿಂದ ಅವಂತಿಕಾ ಧ್ವನಿ ಮುದ್ರಣಕ್ಕೆ ತಡೆ

Published:
Updated:
ಅನ್ಯರಿಂದ ಅವಂತಿಕಾ ಧ್ವನಿ ಮುದ್ರಣಕ್ಕೆ ತಡೆ

ಬೆಂಗಳೂರು: ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಅಭಿನಯಿಸಿರುವ ನಟಿ ಅವಂತಿಕಾ ಶೆಟ್ಟಿ ಪಾತ್ರಕ್ಕೆ ಮೂರನೇ ವ್ಯಕ್ತಿಯಿಂದ ಧ್ವನಿ ಮುದ್ರಣ ಮಾಡಿಸಬಾರದು ಎಂದು ಚಿತ್ರದ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಅವಂತಿಕಾ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

‘ಮುಂದಿನ ವಿಚಾರಣೆಯವರೆಗೂ ಅವಂತಿಕಾ ಅವರ ಧ್ವನಿಯನ್ನು ಡಬ್ಬಿಂಗ್ ಮಾಡಿಸಬಾರದು. ಈ ಕುರಿತು ಮುಚ್ಚಳಿಕೆ ಪತ್ರ ನೀಡಬೇಕು’ ಎಂದು ಆದೇಶಿಸಲಾಗಿದೆ.

ಏನಿದು ಪ್ರಕರಣ?: ‘ಚಿತ್ರ ನಿರ್ಮಾಪಕರು ನನ್ನ ಜೊತೆ ₹ 14 ಲಕ್ಷ ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಚಿತ್ರೀಕರಣದ ಕೊನೆ ಹಂತದಲ್ಲಿ ನನ್ನ ಪಾತ್ರಕ್ಕೆ ಮೂರನೇ ವ್ಯಕ್ತಿಯಿಂದ ಧ್ವನಿ ಮುದ್ರಣ ಮಾಡಿಸಲಾಗುತ್ತಿದೆ. ಇದರಿಂದ ನನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಲಿದೆ’ ಎಂಬುದು ಅವಂತಿಕಾ ಅವರ ಆಕ್ಷೇಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry