ಪೈಪ್‌ಲೈನ್‌ಗೆ ತಾತ್ಕಾಲಿಕ ತೇಪೆ ನಿಲ್ಲಿಸಿ

7

ಪೈಪ್‌ಲೈನ್‌ಗೆ ತಾತ್ಕಾಲಿಕ ತೇಪೆ ನಿಲ್ಲಿಸಿ

Published:
Updated:
ಪೈಪ್‌ಲೈನ್‌ಗೆ ತಾತ್ಕಾಲಿಕ ತೇಪೆ ನಿಲ್ಲಿಸಿ

ಭದ್ರಾವತಿ: ‘ಹನಿ ನೀರನ್ನು ರಕ್ಷಿಸಿ, ಅದು ಪೋಲಾಗದಂತೆ ಉಳಿತಾಯ ಮಾಡಿ’ ಎಂಬ ಘೋಷವಾಕ್ಯ ಹೇಳುವ ಸ್ಥಳೀಯ ಆಡಳಿತವೇ ನೀರು ಪೋಲು ಮಾಡುತ್ತಿರುವ ದೃಶ್ಯವನ್ನು ನಗರದಲ್ಲಿ ಕಾಣಬಹುದು.

ಇಲ್ಲಿನ ರಂಗಪ್ಪ ವೃತ್ತದ ಟಾರ್ ರಸ್ತೆಯ ಮೇಲ್ಭಾಗದಲ್ಲಿ ಪ್ರತಿದಿನ ಬೆಳಿಗ್ಗೆ ಕುಡಿಯುವ ನೀರು ಹಾಳಾದ ಕೊಳವೆಯಿಂದ ಹೊರಬರುತ್ತಿದ್ದು ಅದು ಇಡೀ ರಸ್ತೆ ಆವರಿಸುತ್ತಿದೆ. ಹೊಸ ಲೇಔಟ್ ಭಾಗದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಆರೋಪಿಸುತ್ತಾರೆ ನಾಗರಿಕರು.

‘ಕುಡಿಯುವ ನೀರು ಹೆಚ್ಚು ರಭಸದಲ್ಲಿ ಬರದಿರಲು ಪೈಪ್‌ಲೈನ್ ಹಾಳಾಗಿರುವುದು ಕಾರಣ’ ಎನ್ನುತ್ತಾರೆ ಸ್ಥಳೀಯರಾದ ಧರ್ಮೇಶ್. ‘ರಂಗಪ್ಪ ವೃತ್ತದಲ್ಲಿನ ಸಮಸ್ಯೆ ಹೊಸದಲ್ಲ, ಏನೇ ರಿಪೇರಿ ಮಾಡಿದ್ದರು.  ಒಂದು ತಿಂಗಳಲ್ಲಿ ಪುನಃ ನೀರು ಹರಿಯಲು ಆರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ನಗರಸಭೆ ವಿಫಲವಾಗಿದೆ’ ಎಂದು ಆರೋಪಿಸುತ್ತಾರೆ ವ್ಯಾಪಾರಿ ಶಿವಕುಮಾರ್.

ಕೋಟೆ ಆಂಜನೇಯ ಸ್ವಾಮಿ ದೇವಾಲಯ ಪಕ್ಕದ ರಸ್ತೆಯಲ್ಲಿ ಸಹ ತಿಂಗಳಿಗೊಮ್ಮೆ ಪೈಪ್ ಒಡೆದು ರಸ್ತೆಗೆ ನೀರು ಹರಿಯತ್ತದೆ. ಇದರ ದುರಸ್ತಿ ನಡೆದರೂ ಶಾಶ್ವತ ಪರಿಹಾರ ಇಲ್ಲಿಯ ತನಕ ಸಿಕ್ಕಿಲ್ಲ ಎಂದು ನಗರಸಭೆಗೆ ಹಿಡಿಶಾಪ ಹಾಕುತ್ತಾರೆ.

ಪ್ರಮುಖ ರಸ್ತೆಯಲ್ಲಿನ ಈ ಅವ್ಯವಸ್ಥೆಯಿಂದಾಗಿ ಹಳೇನಗರ, ಹೊಸಮನೆ  ಪ್ರದೇಶಗಳಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಸಹ ಎದುರಾಗಿದೆ. ‘ರಂಗಪ್ಪ ವೃತ್ತದ ರಸ್ತೆಯ ಮಧ್ಯ ಭಾಗದಲ್ಲಿನ ಪೈಪ್ ಬದಲಿಸಿ ಉತ್ತಮ ರಸ್ತೆ ನಿರ್ಮಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದರ ಕುರಿತು ಅಧಿಕಾರಿ ಗಳ ಗಮನಕ್ಕೆ ವಿಷಯ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸದಸ್ಯ ಟಿಪ್ಪುಸುಲ್ತಾನ್.

ಒಟ್ಟಿನಲ್ಲಿ ಮುಖ್ಯ ವೃತ್ತದಲ್ಲಿ ಪೈಪ್ ಒಡೆದು ಹೊರಬರುತ್ತಿರುವ ನೀರನ್ನು ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡರೂ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಶಾಶ್ವತ ಪರಿಹಾರ ಕೊಡಿ ಸುವತ್ತಾ ನಗರಸಭೆ ಮನಸ್ಸು ಮಾಡಲಿ ಎಂಬುದು ನಾಗರಿಕರ ಒತ್ತಾಯ.

* * 

ರಂಗಪ್ಪ ವೃತ್ತದಲ್ಲಿ ನೀರು ಪೋಲಾಗದಂತೆ ಸ್ಥಳೀಯ ಆಡಳಿತ ಶಾಶ್ವತ ಪರಿಹಾರ ಹುಡುಕಲಿ, ತಾತ್ಕಾಲಿಕ ತೇಪೆ ಹಚ್ಚುವುದರಿಂದ ಸಮಸ್ಯೆ ಬಗೆಹರಿಯಲ್ಲ.

ಎಂ. ಶಿವಕುಮಾರ್

ವ್ಯಾಪಾರಿ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry