ಜಿಲ್ಲೆಯ ಹಲವೆಡೆ ಮಳೆ; ಸಿಡಿಲಿಗೆ ರಾಸುಗಳ ಬಲಿ

7

ಜಿಲ್ಲೆಯ ಹಲವೆಡೆ ಮಳೆ; ಸಿಡಿಲಿಗೆ ರಾಸುಗಳ ಬಲಿ

Published:
Updated:
ಜಿಲ್ಲೆಯ ಹಲವೆಡೆ ಮಳೆ; ಸಿಡಿಲಿಗೆ ರಾಸುಗಳ ಬಲಿ

ಕಲಬುರ್ಗಿ:  ಜಿಲ್ಲೆಯ ಹಲವೆಡೆ ಭಾನುವಾರ ಮಿಂಚು–ಗುಡುಗು ಸಹಿತ ಮಳೆ ಸುರಿದಿದ್ದು, ಹಲವೆಡೆ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಬಿಸಿಲಿನಿಂದ ಬಸವಳಿದಿದ್ದ ಜನ ನಿಟ್ಟಿಸಿರು ಬಿಟ್ಟರೆ; ರೈತಾಪಿ ವಲಯ ದಲ್ಲಿ ಹರ್ಷ ಮೂಡಿಸಿದೆ. ಅಫಜಲಪುರ ದಲ್ಲಿ ಸಿಡಿಲಿಗೆ ಎರಡು ರಾಸುಗಳು ಮೃತಪಟ್ಟಿವೆ. ಚಿಂಚೊಳಿ ತಾಲ್ಲೂಕಿನ ಕುಂಚಾವರಂ ವನ್ಯಧಾಮದಲ್ಲಿ ಆಲಿಕಲ್ಲು ಮಳೆ ಸುರಿದು, ಪುಳಕ ಉಂಟು ಮಾಡಿದೆ.

ಎರಡು ರಾಸು ಬಲಿ  (ಅಫಜಲಪುರ ವರದಿ):  ಪ್ರಸ್ತುತ ವರ್ಷ ಇದೇ ಮೊದಲ ಬಾರಿಗೆ ಮುಂಗಾರು ಮಳೆ ಅಫಜಲಪುರ ಸುತ್ತಮುತ್ತ ಭಾನುವಾರ ರಾತ್ರಿ ಸುರಿದಿದ್ದು, ಸಿಡಿಲಿಗೆ ಪಟ್ಟಣದ ಎತ್ತು ಮತ್ತು ಆಕಳು ಮೃತಪಟ್ಟಿವೆ. ಭಾನುವಾರ ಸಂಜೆ ಭಾರಿ ಗುಡುಗು ಮಿಂಚಿನಿಂದ  ಆರಂಭವಾಗಿ ಸುಮಾರು ಒಂದು ಗಂಟೆ ಕಾಲ ಮಳೆ ಸುರಿದಿದೆ. ಮಳೆಯಿಂದ ಮಾಗಿ ಉಳುಮೆಗೆ ಅನು ಕೂಲವಾಗಿದೆ.  ಇನ್ನೊಂದು ಕಡೆ ಒಣಗು ತ್ತಿರುವ ಕಬ್ಬು ಬಾಳೆಗೂ ಅನುಕೂಲ ವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಪಶು ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ ಮಾಹಿತಿ ನೀಡಿ, ಭಾನು ವಾರ ಸಂಜೆ ಸಿಡಿಲಿಗೆ ಅಫಜಲಪುರ ಪಟ್ಟಣದ ಕಾಶೀನಾಥ ಬಳೂರ್ಗಿ ಎಂಬುವವರಿಗೆ ಸೇರಿದ ಆಕಳು ಮತ್ತು ಸಂಗಪ್ಪ ಡಾಂಗೆ ಎಂಬುವರಿಗೆ ಸೇರಿದ ಎತ್ತು ಮೃತಪಟ್ಟಿವೆ ಎಂದು ತಿಳಿಸಿದರು.

ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ! (ಚಿಂಚೋಳಿ ವರದಿ): ಬಿಸಿಲಿನ ಬೇಗೆ ಯಿಂದ ಕಂಗಾಲಾದ ಜನರಿಗೆ ಸೋಮ ವಾರ ಸುರಿದ ಮಳೆ ತಾಲ್ಲೂಕಿನಲ್ಲಿ ತಂಗಾಳಿ ಸೂಸುವಂತೆ ಮಾಡಿದರೆ, ಸುಲೇಪೇಟ ಸುತ್ತಲೂ ಸುರಿದ ಬಿರುಗಾಳಿ ಸಹಿತ ಮಳೆಗೆ ಚಿಂಚೋಳಿ–ಕಲಬುರ್ಗಿ ಮಾರ್ಗದ ರಾಜ್ಯ ಹೆದ್ದಾರಿ 32ರಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಸುಲೇಪೇಟ ಪಟ್ಟಣದ ಮೇಘರಾಜ ರಾಠೋಡ್‌ ಅವರ ಕಟ್ಟಿಗೆ ಅಡ್ಡಾದಿಂದ ಹೊಡೇಬೀರನಹಳ್ಳಿವರೆಗಿನ ರಸ್ತೆ ಬದಿಯ ನೀಲಗಿರಿ ಮರಗಳು ಬಿರುಗಾಳಿ ಸಿಲುಕಿ ಧರೆಗುರುಳಿವೆ. ಇದರಿಂದ ಕಲಬುರ್ಗಿ–ಚಿಂಚೋಳಿ ಮಧ್ಯೆ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು.

ನಂತರ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಜೆಸಿಪಿ ನೆರವಿನೊಂದಿಗೆ ಮರಗಳನ್ನು ತೆರವುಗೊಳಿಸಿದ ಮೇಲೆ ಸಂಚಾರ ಆರಂಭವಾಯಿತು ಎಂದು ಶಿಕ್ಷಕ ದೇವಿದಾಸ್‌ ರಾಠೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ವಾಹನಗಳು ಕುಪನೂರು ಮಾರ್ಗವಾಗಿ ಕೆರೋಳ್ಳಿ ಮೂಲಕ ಸುಲೇ ಪೇಟೆಗೆ ಬಂದು ಚಿಂಚೋಳಿ ತಲುಪಿದವು. ಆಗ ಎದುರಿಗೆ ಬಂದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡಲು ಹೋಗಿ ಬಸ್ಸೊಂದು ರಸ್ತೆಯ ಬದಿಯಲ್ಲಿ ಸಿಕ್ಕಿಬಿದ್ದಿತು ಎಂದು ಕಲಾವಿದ ರೇವಣ ಸಿದ್ದಯ್ಯ ಹಿರೇಮಠ ತಿಳಿಸಿದರು.

ರೋಹಿಣಿಯ ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಕ್ಕುರುಳಿವೆ. ತಾಲ್ಲೂಕಿನ ಸುಲೇಪೇಟ, ಗಡಿಕೇಶ್ವರಾರ್‌ ಮೊದಲಾದ ಕಡೆ ಮಳೆ ಸುರಿದಿದೆ. ವನ್ಯಜೀವಿಧಾಮದಲ್ಲಿ ಆಲಿಕಲ್ಲು  ಚಿಂಚೋಳಿ ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿದಿದೆ.

ಗುಡುಗು ಮಿಂಚು ಹಾಗೂ ಆಲಿಕಲ್ಲು ಸಹಿತ ಸುರಿದ ಮಳೆಯಿಂದ ವನ್ಯಜೀವಿ ಧಾಮದಲ್ಲಿ ಪುಳಕ ಉಂಟು ಮಾಡಿದೆ. ತಾಲ್ಲೂಕಿನ ಗೊಟ್ಟಮಗೊಟ್ಟ, ಚಂದ್ರಂಪಳ್ಳಿ, ಕೊಳ್ಳೂರು, ಐನೋಳ್ಳಿ ಯಲ್ಲಿ ಭಾರಿ ಮಳೆ ಸುರಿದಿದ್ದು ವರದಿ ಯಾಗಿದೆ. ಚಿಂಚೋಳಿ, ಸಾಲೇಬೀರನ ಹಳ್ಳಿ, ಕೋಡ್ಲಿ, ರಟಕಲ್‌ ಮೊದಲಾದ ಕಡೆಗಳಲ್ಲಿ ತುಂತುರು ಮಳೆಯಾಗಿದೆ.

ಹೊಲಗದ್ದೆಗಳಲ್ಲಿ ನೀರು  (ಕಮಲಾಪುರ ವರದಿ):  ಸಮೀಪದ ಮರಗುತ್ತಿ, ಡೋಂಗರಗಾಂವ, ಕಾಳಮಂದರ್ಗಿ ಪ್ರದೇಶದಲ್ಲಿ ಸೋಮವಾರ ಮಳೆಯಾ ಗಿದ್ದು, ಹೊಲಗದ್ದೆಗಳಲ್ಲಿ ನೀರು ನಿಂತಿವೆ. ಭೂಮಿಯಲ್ಲಿ ಮೂರು ಬಟ್ಟು ಹಸಿ ಕಾಣಿಸಿಕೊಂಡಿದೆ. ಡೋಂಗರಗಾಂವ್‌ ನಲ್ಲಿ  ಒಣಮಣ್ಣಿನಲ್ಲೆ ಬಿತ್ತನೆ ಆರಂಭಿ ಸಿದ್ದು, ಈ ಮಳೆ ಆಧಾರವಾಗಲಿದೆ ಎಂದು ರೈತರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry