₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೈದಾನ

7

₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೈದಾನ

Published:
Updated:
₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೈದಾನ

ಬೇಲೂರು: ‘ಇಲ್ಲಿನ ಸರ್ಕಾರಿ ಪಿಯು ಕಾಲೇಜು ಮೈದಾನದ ಆವರಣದಲ್ಲಿ ₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್‌ ಆಟದ ಮೈದಾನ ಮತ್ತು ಉದ್ಯಾನ ನಿರ್ಮಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ) ಸೋಮವಾರ ಹೇಳಿದರು.

ಮೈದಾನಕ್ಕೆ ಭೂಮಿಪೂಜೆ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೇಲೂರು ಪಟ್ಟಣದಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇತ್ತು. ಆದ್ದರಿಂದ ಈ ಮೈದಾನದಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗುವುದು, ಕಾರಂಜಿ  ಹಾಗೂ ಕುರ್ಚಿಗಳನ್ನು ಹಾಕಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ 23 ಉದ್ಯಾನಗಳು ಇವೆಯಾದರೂ ಅವು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಜತೆಗೆ ಹೈಟೆಕ್‌ ಪಾರ್ಕ್‌ಗಳೂ ಇಲ್ಲ’ ಎಂದರು.

ಪುರಸಭೆಯ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಮಾತನಾಡಿ, ‘ಇಂದಿನಿಂದ ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಿ ಸಂಗ್ರಹಿಸಲಾಗುವುದು. ಸಾರ್ವಜನಿಕರೂ ಕಸವನ್ನು ವಿಂಗಡಿಸಿ ಮಾಡಿ ಆಟೊ ಟಿಪ್ಪರ್‌ಗಳಿಗೆ ಹಾಕಬೇಕು. ಸಂಗ್ರಹವಾದ ಕಸವನ್ನು ವಿಂಗಡಿಸಿ ಗೊಬ್ಬರ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು. ಜನರೂ ನೀರನ್ನು ಮಿತವಾಗಿ ಬಳಸಬೇಕು’ ಎಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ಕಾಶಿ ಶಿವು, ಆರೋಗ್ಯಾಧಿಕಾರಿ ಎಸ್‌.ವೆಂಕಟೇಶ್‌, ಎಂಜಿನಿಯರ್‌ ಚಂದನ್‌, ಗುತ್ತಿಗೆದಾರ ಬಿರಟೆಮನೆ ಸುರೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry