12 ಸಾವಿರ ಸಸಿಗಳಿಗೆ ಬಸವಣ್ಣನವರ ಹೆಸರು

7

12 ಸಾವಿರ ಸಸಿಗಳಿಗೆ ಬಸವಣ್ಣನವರ ಹೆಸರು

Published:
Updated:
12 ಸಾವಿರ ಸಸಿಗಳಿಗೆ ಬಸವಣ್ಣನವರ ಹೆಸರು

ಹಾವೇರಿ: ‘ಬಸವಣ್ಣನವರು ಧರ್ಮ ಗುರುಗಳು, ಲಿಂಗಾಯತರವರು ಎಂದೆಲ್ಲ ಹೇಳಿಕೊಂಡು ಅವರನ್ನು ಸಣ್ಣವರನ್ನಾಗಿ ಮಾಡಿದ್ದೇವೆ’ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು. ತಾಲ್ಲೂಕಿನ ‘ಅಗಡಿಯ ಅಕ್ಕಿಮಠದ ಪರಿಸರ ಜಾತ್ರೆ’ಯ ಪ್ರಯುಕ್ತ ನಗರದ ವೀರಶೈವ ತರುಣ ಸಂಘದ ಶ್ರೀ ಗುರು ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡ ‘1200 ಸಸಿಗಳಿಗೆ ಬಸವ ಸಸಿಗಳು ಎಂದು ನಾಮಕರಣ’ ಮಾಡುವ ಸಮಾರಂಭ ದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ವಚನಗಳು ವೈಜ್ಞಾನಿಕ ವಿಚಾರಗಳು. ಅದು ಕಟು ಸತ್ಯಗಳು. ಅವರ ಆಧ್ಯಾತ್ಮಿಕ ವಚನಗಳನ್ನು ವೈಜ್ಞಾನಿಕವಾಗಿ ನೋಡುವ ಕಣ್ಣುಗಳು ಬೇಕಾಗಿವೆ. ವೈಜ್ಞಾನಿಕ ದೃಷ್ಟಿಕೋನದಿಂದ ವಚನಗಳನ್ನು ವಿಶ್ಲೇಷಿಸಬೇಕಾಗಿದೆ’ ಎಂದರು.

‘ಶಿವನನ್ನು ‘ಮುಕ್ಕಣ್ಣ’ ಎನ್ನುತ್ತಾರೆ. ನಾವೆಲ್ಲ ಎರಡು ಕಣ್ಣುಗಳ ಜೊತೆ ಮೂರನೇ ಅರಿವಿನ ಕಣ್ಣನ್ನು ತೆರೆದು ನೋಡಬೇಕು ಎಂಬುದು ಶರಣರ ವಿಚಾರಧಾರೆ’ ಎಂದರು. 

‘ಯಾವುದೇ ಕ್ರಿಯೆಯನ್ನು ಮಾಡುವ ಮೊದಲು ಸತ್ಯದ ಅರಿವು ಇರಬೇಕು. ಹುಟ್ಟು ಮತ್ತು ಸಾವುಗಳ ಮಧ್ಯೆ ಬದುಕನ್ನು ಜ್ಞಾನ ಹಾಗೂ ಅರಿವಿನಿಂದ ಸಾಗಿಸಬೇಕು. ಕೇಡುಗಳನ್ನು ಜ್ಞಾನ ಹಾಗೂ ಅರಿವಿನಿಂದ ನೋಡಿ’ ಎಂದರು.

‘ತನು ವಿಡಿದಿಹುದು ಪ್ರಕೃತಿ, ಪ್ರಕೃತಿ ವಿಡಿಹುದು ಪ್ರಾಣ, ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಅರಿವು’ ಎಂದು ಬಸವಣ್ಣನವರು ಪ್ರಕೃತಿ, ಬದುಕು, ಜ್ಞಾನ, ಅರಿವುಗಳ ಕುರಿತು 12ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಶೋಷಣೆ ಸಹಿಸಿಕೊಳ್ಳಬೇಡ ಎಂದು ಬಸವಣ್ಣನವರು ಕುರಿಯ ಮರಿಗೂ ಹೇಳಿದ್ದಾರೆ. ಈ ಮಾನವೀ ಯತೆ ಬರಬೇಕಾಗಿದೆ’ ಎಂದರು.

ಪ್ರಧಾನಿ ಭೇಟಿ: ‘ವಚನ ಸಂಪುಟ’ ಲೋಕಾರ್ಪಣೆ ಮಾಡುವಂತೆ ಪ್ರಧಾನಿಗೆ ಮನವಿ ಮಾಡುವ ಸಲುವಾಗಿ ನವೆಂಬರ್‌ನಲ್ಲಿ ಮಾಜಿ ಸಂಸದ ಐ.ಜಿ. ಸನದಿ ಜೊತೆ ಸಚಿವ ಅನಂತ್‌ಕುಮಾರ್ ಕಚೇರಿಗೆ ತೆರಳಿದ್ದೆವು.

ಆಗ ನೋಟು ರದ್ದತಿ ವಿಚಾರ ದೇಶದಲ್ಲೆಡೆ ಚರ್ಚೆ ಯಲ್ಲಿತ್ತು. ಹೀಗಾಗಿ, ಪ್ರಧಾನಿ ಭೇಟಿಯ ಅವಕಾಶ ಸಿಗುವ ಅನುಮಾನ ಕಾಡಿತ್ತು. ಆದರೆ, ಪ್ರಧಾನಿ ಕಾರ್ಯಾಲಯಕ್ಕೆ ಕರೆ ಮಾಡಿ, ವಿನಂತಿಸಲಾಯಿತು. ಕರೆ ಮಾಡಿದ ಐದೇ ನಿಮಿಷದಲ್ಲಿ ಭೇಟಿಗೆ ಅವಕಾಶ ಕಲ್ಪಿಸಿದರು. ಕೇವಲ ಐದು ನಿಮಿಷದಲ್ಲಿ ಪ್ರಧಾನಿಯ ಭೇಟಿ ಸಾಧ್ಯ ವಾಗಿರುವುದೇ ಅಚ್ಚರಿ. ಸಹಕರಿಸಿದ ಇಬ್ಬರೂ ಬೇರೆ ಧರ್ಮ ಮತ್ತು ಜಾತಿಯವರಾಗಿದ್ದರು’ ಎಂದರು.

ಕೂಡಲ ಸಂಗಮದಿಂದ ತಂದ ನೀರನ್ನು ಸಸಿಗಳಿಗೆ ಹಾಕುವ ಮೂಲಕ ಇಳಕಲ್ ಚಿತ್ತರಗಿ ವಿಜಯ ಮಹಾಂತೇ ಶ್ವರ ಸಂಸ್ಥಾನಮಠದ ಮಹಾಂತಪ್ಪ ನವರು, ‘ಬಸವ ಸಸಿಗಳು’ ಎಂದು ನಾಮ ಕರಣ ಮಾಡಿದರು. ಬಳಿಕ ಮಾತ ನಾಡಿದ ಅವರು, ‘ಬಸವ ತತ್ವದಲ್ಲಿ ಸಸಿಗಳು ಹಾಗೂ ಶಿಶುಗಳು ಬರಬೇಕು’ ಎಂದರು. ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿದರು.

‘ಒಟ್ಟು 40 ಗ್ರಾಮಗಳಲ್ಲಿ ತಲಾ 300ರಂತೆ 12 ಸಾವಿರ ಸಸಿಗಳನ್ನು ನಾಟಿ ಮಾಡಲಾಗುವುದು. ಇದು ಬೆಂಡು ಬತ್ತಾಸ್‌ ಜಾತ್ರೆಯಲ್ಲ, ಬದುಕು ಮತ್ತು ಪರಿಸರದ ಜಾತ್ರೆ’ ಎಂದರು. ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ನವದೆಹಲಿ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು, ವೀರಶೈವ ತರುಣ ಸಂಘದ ಮಹಾಂತಪ್ಪ ಕ. ಮಾಸೂರ, ಡಾ.ದಯಾನಂದ ಸುತ್ತು ಕೋಟಿ, ಬಿಜೆಪಿ ಮುಖಂಡ ಪರಮೇಶ್ವ ರಪ್ಪ ಮೇಗಳಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry