ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಕದ ಬಾಗಿಲು!

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ತುರ್ಕ್‌ಮೆನಿಸ್ತಾನದ ಕಾರಕುಂ ಮರುಭೂಮಿಯಲ್ಲಿ 40 ವರ್ಷಗಳಿಂದ ಉರಿಯುತ್ತಿರುವ ಹೊಂಡವಿದೆ. ಇದನ್ನು ನರಕದ ಬಾಗಿಲು ಎಂದೇ ಕರೆಯಲಾಗುತ್ತದೆ. ಭೂಗರ್ಭಶಾಸ್ತ್ರಜ್ಞರು ಈ ಸ್ಥಳದಲ್ಲಿ ಹೊಂಡವೊಂದನ್ನು ತೊಡಗಿದಾಗ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು.  ನೈಸರ್ಗಿಕ ಅನಿಲಗಳು ನಿರಂತರವಾಗಿ ದಹಿಸುತ್ತಿರುವುದೇ ಇದಕ್ಕೆ ಕಾರಣ ಎಂಬುದು ವಿಜ್ಞಾನಿಗಳ ಅಭಿಮತ.

****

ಗ್ರೇಟ್ ಬ್ಲೂ ಹೋಲ್
ಬೆಲ್ಜೆ ದೇಶದಲ್ಲೊಂದು ಸಮುದ್ರ ತೀರವಿದೆ. ಅಲ್ಲಿನ ಬೆಲ್ಜೆ  ನಗರದಲ್ಲಿ (ದೇಶ ಮತ್ತು ನಗರದ ಹೆಸರು ಒಂದೇ) ಗ್ರೇಟ್ ಬ್ಲೂ ಹೋಲ್ ಎಂಬ ಪ್ರದೇಶ ವಿಶೇಷ ಆಕರ್ಷಣೆಯಿಂದ ಕೂಡಿದೆ.  ಸಮುದ್ರದ ಮಧ್ಯದಲ್ಲಿ ದಟ್ಟ ನೀಲಿ ಹೊಂಡ ರೂಪುಗೊಂಡಿರುವುದೇ ಆಕರ್ಷಣೆಗೆ ಕಾರಣ. ಸುಮಾರು 300 ಮೀಟರ್ ಪ್ರದೇಶದಲ್ಲಿ ಹಬ್ಬಿರುವ ಈ ಹೊಂಡ, 125 ಮೀಟರ್ ಆಳವಿದೆ. ಸ್ಕೂಬ್‌ ಡೈವಿಂಗ್‌ಗೆ ಈ ಪ್ರದೇಶ ಹೆಸರುವಾಸಿಯಾಗಿದೆ.

****
ಲಿಪ್‌ಸ್ಟಿಕ್ ಅಲ್ಲ

ಈ ಚಿತ್ರ ನೋಡಿದರೆ ಸಮುದ್ರದಾಳದಲ್ಲಿ ಯಾರೋ ಲಿಪ್‌ಸ್ಟಿಕ್ ಗಳನ್ನು ಬಿಸಾಡಿದಂತೆ ಕಾಣುತ್ತದಲ್ಲವೇ? ಆದರೆ, ಇವು ಲಿಪ್‌ಸ್ಟಿಕ್ ಅಲ್ಲ.  ಹೈಡ್ರೋಥರ್ಮಲ್ ವೆಂಟ್ ಹುಳುಗಳು ಇವು. ಈ ಹುಳುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಇರುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT