ಮೆಣಸಿನ ಹಾಡ್ಯ: ಹದಗೆಟ್ಟ ರಸ್ತೆ– ಬಸ್ ಸಂಚಾರ ಸ್ಥಗಿತ

7

ಮೆಣಸಿನ ಹಾಡ್ಯ: ಹದಗೆಟ್ಟ ರಸ್ತೆ– ಬಸ್ ಸಂಚಾರ ಸ್ಥಗಿತ

Published:
Updated:
ಮೆಣಸಿನ ಹಾಡ್ಯ: ಹದಗೆಟ್ಟ ರಸ್ತೆ– ಬಸ್ ಸಂಚಾರ ಸ್ಥಗಿತ

ಮೆಣಸಿನಹಾಡ್ಯ(ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಕೊಗ್ರೆಯಿಂದ ಮೆಣ ಸಿನಹಾಡ್ಯ ಮಾರ್ಗವಾಗಿ ಹೊರ ನಾಡು ತಲುಪುವ ರಸ್ತೆ ಸಂಪೂರ್ಣ ಹದ  ಗೆಟ್ಟಿದ್ದು, ಬಸ್ ಸಂಚಾರ ಸ್ಥಗಿತ ಗೊಂಡಿದೆ. ಇದರಿಂದಾಗಿ ಸಾರ್ವಜ ನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

ಕೊಗ್ರೆ ಮೂಲಕ ಬಲಿಗೆ ಹೊರನಾಡು ತಲುಪುವ ರಸ್ತೆಯಲ್ಲಿ ಬಲಿಗೆ ಯಿಂದ ಹೊರನಾಡುವರೆಗಿನ ರಸ್ತೆ ಉತ್ತಮ ಸ್ಥಿತಿಯಲ್ಲಿದೆ. ಆದರೆ ಶಾಸಕ ಡಿ.ಎನ್.ಜೀವರಾಜ್ ಪ್ರತಿನಿಧಿಸುವ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯ ಕೊಗ್ರೆಯಿಂದ ಮೆಣಸಿನಹಾಡ್ಯದ ವರೆಗಿನ ಸುಮಾರು 7 ಕಿಮೀ ರಸ್ತೆ ಹಲವು ವರ್ಷ ಗಳಿಂದ ದುರಸ್ತಿಯಾಗದೇ ಸಂಪೂರ್ಣ ಹಾಳಾಗಿದೆ.

ಪ್ರತಿನಿತ್ಯ ಈ ರಸ್ತೆಯಲ್ಲಿ 4 ಟ್ರಿಪ್ ಸಂಚರಿಸುತ್ತಿದ್ದ ಬಸ್‌ ನಡೆಸುತ್ತಿದ್ದ ಖಾಸಗಿ ಇದೀಗ ನಿಲುಗಡೆಯಾಗಿದೆ. ಇದರಿಂದ ಜಯಪುರ, ಕಳಸ ಹಾಗೂ ಹೊರನಾಡು ಶಾಲೆಗಳಿಗೆ ತೆರಳುತ್ತಿದ್ದ ನೂರಾರು ವಿದ್ಯಾರ್ಥಿಗಳು ಎರಡು ದಿನಗಳಿಂದ ಶಾಲೆಯಿಂದ ದೂರ ಉಳಿದಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶವಾದ ಮೆಣಸಿನಹಾಡ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಹೊರನಾಡು ಶೃಂಗೇರಿ ನಡುವೆ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ.

ರಸ್ತೆಗೆ ಡಾಂಬರು ಹಾಕಿದ ನಂತರ ಯಾರೂ ಅತ್ತ ಸುಳಿದಿಲ್ಲ. ಇದರಿಂದ ಸಾತ್ ಕೊಡಿಗೆಯಿಂದ ಮೆಣಸಿನಹಾಡ್ಯ ಬಲಿಗೆವರೆಗಿನ ಸುಮಾರು 7 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ಗುರುತುಸಿ ಗದಂತಾಗಿದೆ. ನಿರ್ವಹಣೆಯನ್ನೇ ಮಾಡದ ಕಾರಣ ಜನ ಸಾಮಾನ್ಯರೂ ನಡೆ ದಾಡುವ ಸ್ಥಿತಿಯಲ್ಲೂ ಇಲ್ಲ. 

ಕಳಸದಿಂದ ಹೊರನಾಡು, ಬಲಿಗೆ ಮೂಲಕ ಕೊಗ್ರೆ ಶೃಂಗೇರಿಗೆ ಕೆಎಸ್ ಆರ್‌ಟಿಸಿ ಮಿನಿ ಬಸ್‌ಗಳನ್ನು ಓಡಿಸಿದಲ್ಲಿ   ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.ಜಿಲ್ಲಾಧಿಕಾರಿಗಳು ಕ್ರಮ ಕೈಗೊ ಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

* * 

ಜಿಲ್ಲಾಧಿಕಾರಿಗಳು ಕಳಸದಿಂದ ಬಲಗೆ ಮೆಣಸಿನಹಾಡ್ಯ ಕೊಗ್ರೆ ಮೂಲಕ ಶೃಂಗೇರಿಗೆ ನಿತ್ಯ ನಾಲ್ಕು ಮಿನಿ ಬಸ್‌ಗಳನ್ನು ಓಡಿಸಲು ಆದೇಶ ನೀಡಿದಲ್ಲಿ ಸಮಸ್ಯೆ ಪರಿಹಾರವಾಗಲಿದೆ.

ಪ್ರಸಾದ್ ಜೈನ್

ಜೆಡಿಎಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry