ಬೆಲ್ಲಪ್ರಿಯ ಸಿದ್ಧಾರ್ಥ

7

ಬೆಲ್ಲಪ್ರಿಯ ಸಿದ್ಧಾರ್ಥ

Published:
Updated:
ಬೆಲ್ಲಪ್ರಿಯ ಸಿದ್ಧಾರ್ಥ

ಸದೃಢ ದೇಹ, ಮಿಂಚಿನ ನೋಟದ ಮಾಡೆಲ್‌ ಮತ್ತು ನಟ ಸಿದ್ಧಾರ್ಥ್‌ ಮಲ್ಹೋತ್ರ ಅವರು ‘ಸ್ಟೂಡೆಂಟ್ಸ್‌ ಆಫ್‌ ದಿ ಇಯರ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು.

ಸಿದ್ಧಾರ್ಥ್‌ ಮಲ್ಹೋತ್ರಾ ಪ್ರಸಿದ್ಧ ‘ಮೆನ್ಸ್‌ ಹೆಲ್ತ್‌ ಇಂಡಿಯಾ’ ಮ್ಯಾಗಜೀನ್‌ನ ಕವರ್‌ ಪೇಜ್‌ನಲ್ಲಿ ಎರಡು ಬಾರಿ ಮಿಂಚಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಏಕೈಕ ನಟ ಎಂಬ ಖ್ಯಾತಿ ಅವರದು.

ಸಿದ್ಧಾರ್ಥ್‌ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ‘ಸಿದ್ಧಾರ್ಥ್‌ಗೆ ಸದೃಢ ಮೈಕಟ್ಟಿದೆ. ಒಬ್ಬ ನಟನಾಗಿ ಅವರು ನೃತ್ಯ ಹಾಗೂ ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕು. ಅನೇಕ ಸಾರಿ ಅವರು ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತರಬೇತಿ ನೀಡುವಾಗ ಸಲೀಸಾಗಿ ಮಾಡುವ ಕಸರತ್ತು ಹಾಗೂ ಕಾಲಿನ ಚಲನೆಗೆ ಹೆಚ್ಚು ಗಮನ  ನೀಡುತ್ತೇನೆ. ದೇಹದ ಆರೈಕೆ ಕಡೆ ಗಮನ ವಹಿಸುವಂತೆ ಹೇಳುತ್ತಿರುತ್ತೇನೆ’ ಎಂದು ಸಿದ್ಧಾರ್ಥ್‌ ಅವರ ಜಿಮ್‌ ತರಬೇತುದಾರ ಸತೀಶ್‌  ಹೇಳುತ್ತಾರೆ.

ಸಿದ್ಧಾರ್ಥ್‌ ‘ಏಕ್‌ ವಿಲನ್‌’ ಚಿತ್ರಕ್ಕಾಗಿ ತುಂಬ ಶ್ರಮ ಪಟ್ಟಿದ್ದಾರೆ. ಈ ಚಿತ್ರಕ್ಕಾಗಿ ಸಿಕ್ಸ್‌ ಪ್ಯಾಕ್‌ ಮಾಡಿಕೊಳ್ಳಬೇಕಿತ್ತು. ಸಿಕ್ಸ್‌ ಪ್ಯಾಕ್‌ ಅನ್ನು ವರ್ಷಪೂರ್ತಿ ಒಂದೇ ರೀತಿ ಕಾಪಿಟ್ಟುಕೊಳ್ಳುವುದು ಕಷ್ಟ. ಇದಕ್ಕಾಗಿ ಸಿದ್ಧಾರ್ಥ್‌ ಬಿಡುವು ಸಿಕ್ಕಾಗಲೆಲ್ಲಾ ಫುಟ್‌ಬಾಲ್‌ ಆಡುತ್ತಿದ್ದಾರಂತೆ.

ಇನ್ನು ಜಿಮ್‌ನಲ್ಲಿ ಒಂದೇ ರೀತಿಯ ವ್ಯಾಯಾಮ, ವರ್ಕ್‌ಔಟ್‌ಗಳನ್ನು ಮಾಡಿ ಬೋರಾಗದಂತೆ, ಅವರು ಪ್ರತಿ ನಾಲ್ಕು ವಾರಗಳಿಗೊಮ್ಮೆ ವ್ಯಾಯಾಮ ಮಾಡುವ ವಿಧಾನಗಳನ್ನು ಬದಲಾಯಿಸುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮೊದಲು ಹತ್ತು ನಿಮಿಷ ಪುಶ್‌ ಅಪ್‌ ಮಾಡುತ್ತಾರೆ. ಬಳಿಕ ವೇಟ್‌ ಟ್ರೈನಿಂಗ್‌. ವಾರದಲ್ಲಿ ಕನಿಷ್ಠ ಎರಡು ದಿನ ಈಜು ಹಾಗೂ ಓಟ ಇವರ ವ್ಯಾಯಾಮದ ವೈಖರಿ.

ಕೋಳಿ, ಮೀನು ಹಾಗೂ ಪ್ರೊಟೀನ್‌ ಅಧಿಕವಿರುವ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ಹೆಚ್ಚು ನೀರು ಕುಡಿಯುತ್ತಾರೆ. ಚಿತ್ರೀಕರಣ, ಕಾರ್ಯಕ್ರಮಗಳ ನಡುವೆ ಊಟಕ್ಕೆ  ಸಮಯ ಸಿಗದಿದ್ದರೆ ಸ್ಮೂತಿಗಳನ್ನು ತಿನ್ನುತ್ತಾರೆ.

ಆ್ಯಂಟಿಅಕ್ಸಿಡೆಂಟ್‌ ಹೆಚ್ಚು ಇರುವ ಡಾರ್ಕ್‌ ಚಾಕಲೇಟ್‌ ಇಷ್ಟ.  ಸಕ್ಕರೆ ಬಳಕೆ ಇಲ್ಲವೇ ಇಲ್ಲ, ಆದರೆ ಬೆಲ್ಲ ಅಂದ್ರೆ ಅಚ್ಚುಮೆಚ್ಚು. ಜ್ಯೂಸ್‌ನಿಂದ ದೂರ, ಆದರೆ ಸಿಪ್ಪೆ ಸಮೇಪ ಹಣ್ಣು ತಿನ್ನುತ್ತಾರೆ. ಸಿದ್ಧಾರ್ಥ್‌ ಮದ್ಯಪಾನ, ಧೂಮಪಾನದಿಂದ ಅಂತರ ಕಾಯ್ದುಕೊಂಡಿದ್ದಾರೆ. 

****

* ಹುಟ್ಟಿದ್ದು:16 ಜನವರಿ 1985

* ಎತ್ತರ: 6.1 ಅಡಿ

* ತೂಕ: 80 ಕೆ.ಜಿ.

* ಸುತ್ತಳತೆ: 42 –36–15

* ಇಷ್ಟದ ಆಹಾರ: ಜಿಲೇಬಿ, ಚಾಕಲೇಟ್‌ ಫಡ್ಜ್‌, ಬಿರಿಯಾನಿ, ಚಿಕನ್‌  ರೋಲ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry