‘ಡಾಕ್ಟರ್ ಬದಲಿಗೆ ಆ್ಯಕ್ಟರ್‌ ಆದೆ...’

7

‘ಡಾಕ್ಟರ್ ಬದಲಿಗೆ ಆ್ಯಕ್ಟರ್‌ ಆದೆ...’

Published:
Updated:
‘ಡಾಕ್ಟರ್ ಬದಲಿಗೆ ಆ್ಯಕ್ಟರ್‌ ಆದೆ...’

‘ಸಾನು ಬೇಬಿ ನಾವು ಪಾನಿಪೂರಿ ತಿನ್ನೋಕೆ ಹೋಗೋಣ’ ಎಂದು   ಮಗುವಿನೊಂದಿಗೆ ಮಗುವಾಗುವ ಈಕೆಯ ಹೆಸರು ಕಾವ್ಯಶ್ರೀ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ನೀಲಿ’ ಧಾರಾವಾಹಿಯ ಪ್ರಣತಿ ಪಾತ್ರಧಾರಿ. ಬೆಂಗಳೂರು ಸಮೀಪದ ನೆಲಮಂಗಲದವರಾದ ಇವರು ಕಿರುತೆರೆ ಪ್ರವೇಶಿಸಿದ್ದು, ‘ದುರ್ಗಾ’ ಧಾರಾವಾಹಿ ಮೂಲಕ.   

* ನೀವು ಅಳುಮುಂಜಿನಾ?

ನನ್ನ ವ್ಯಕ್ತಿತ್ವ ಸಂದರ್ಭಕ್ಕೆ ತಕ್ಕ ಹಾಗೇ ಬದಲಾಗುತ್ತದೆ. ನಾನು ತುಂಬಾ ಭಾವುಕ ಜೀವಿ. ಆದರೆ ಭಾವುಕತೆಯನ್ನು  ಕ್ಷಣದಲ್ಲಿ ನಿಯಂತ್ರಿಸಿಕೊಳ್ಳುವ ಕಲೆ ಗೊತ್ತಿದೆ.  ಚಿಕ್ಕಪುಟ್ಟ ವಿಷಯಗಳಿಗೆಲ್ಲಾ ಅಳುವುದಿಲ್ಲ.

* ಮೂರನೇ ಹೆಂಡ್ತಿ ಆಗೋ ಅವಕಾಶ ಸಿಕ್ಕರೆ?

ಅಯ್ಯೋ ಭಗವಂತ, ಬೇಡಪ್ಪಾ ಬೇಡ. ಧಾರಾವಾಹಿನೇ ಬೇರೆ, ನಿಜ ಜೀವನಾನೇ ಬೇರೆ. ಮೂರನೇ ಹೆಂಡ್ತಿ ಆಗೋ ಕನಸೆಲ್ಲಾ ನನಗೆ ಇಲ್ಲ. 

* ಎಂದಾದರೂ ಪತ್ತೇದಾರಿ ಕೆಲಸ ಮಾಡಿದ್ದು ಇದೆಯಾ?

ಮಹಾನ್ ಎನ್ನುವಂತಹ ಪತ್ತೇದಾರಿಕೆ ಮಾಡಿಲ್ಲ.  ಆದ್ರೆ ಗಂಟೆಗಟ್ಟಲೆ ಬಾಯ್‌ಫ್ರೆಂಡ್ ಜೊತೆ ಫೋನಿನಲ್ಲಿ ಮಾತಾಡಿ, ನಾನು ಯಾರೂ ಅಂತ ಕೇಳಿದಾಗ ದೊಡ್ಡಮ್ಮ, ಚಿಕ್ಕಮ್ಮ ಎನ್ನುವ ಗೆಳತಿಯರ ಸುಳ್ಳನ್ನು ಪತ್ತೆ ಮಾಡಿದ್ದೇನೆ.

* ಮಕ್ಕಳಂದ್ರೆ ನಿಮಗೆ ಇಷ್ಟ ಇಲ್ವಂತೆ?

ಹೌದು. ಮೊದಲು ಮಕ್ಕಳು ಅಂದ್ರೆ ಇಷ್ಟ ಆಗ್ತಾ ಇರಲಿಲ್ಲ.  ಮಾರು ದೂರ ಓಡ್ತಾ ಇದ್ದೆ. ಆದರೆ ಈಗ ಧಾರಾವಾಹಿಯಲ್ಲಿ ಸಾನ್ವಿಯ ಜೊತೆ ಹೆಚ್ಚು  ಸಮಯ ಕಳೆಯುವುದರಿಂದ ಅವಳ ಮಾತು, ಹಾವಭಾವ ನೋಡಿ, ಮಕ್ಕಳ ಮೇಲೆ ಪ್ರೀತಿ ಹುಟ್ಟಲು ಶುರುವಾಗಿದೆ.

* ಭೂತ  ನೋಡಿದ್ದೀರಾ?

ಇಲ್ಲಿಯವರೆಗೂ ಕಾಣಿಸಿಕೊಂಡಿಲ್ಲ. ಬೇರೆಯವರು ಕಥೆ ಹೇಳುವುದನ್ನು ಕೇಳಿದ್ದೇನೆ. ಅದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು

* ನಿಮಗೆ ಏನಿಷ್ಟ?

ನಗುವುದೆಂದರೆ ಇಷ್ಟ.   ದಿನಪೂರ್ತಿ ನಗುತ್ತಲೇ ಇರ್ತೀನಿ.  ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತೀನಿ. 

* ಸಿನಿಮಾದಲ್ಲಿ ಅವಕಾಶ ಸಿಕ್ಕಿದಿಯೇ?

ಸದ್ಯಕ್ಕೆ ಪುನೀತ್ ರಾಜ್‌ಕುಮಾರ್ ಅಭಿಯನದ ‘ಅಂಜನಿಪುತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ಅವರ ಅತ್ತೆ ಮಗಳ ಪಾತ್ರ ನನ್ನದು.

* ಸಿನಿಮಾ ಚಿತ್ರೀಕರಣ ಅನುಭವ  ಹೇಗಿತ್ತು?

ತುಂಬಾ ಖುಷಿ ನೀಡಿದೆ. ಮೊದಲ ದಿನ ನಟಿ ರಮ್ಯಾಕೃಷ್ಣ ಅವರ ಜೊತೆಗಿನ ದೃಶ್ಯದ ಚಿತ್ರೀಕರಣ ಇತ್ತು. ಡೈಲಾಗ್  ಹೇಳೋಕೆ  ಸ್ವರ  ನಡುಗುತ್ತಿತ್ತು.    ಪುನೀತ್‌ ಸರ್   ಸರಳ ವ್ಯಕ್ತಿ. ಅವರು ಸೆಟ್‌ನಲ್ಲಿ  ಆತ್ಮೀಯ ವಲಯ ಸೃಷ್ಟಿಸಿದ್ದರು. ಹಾಗಾಗಿ ನಟನೆ ಕಷ್ಟ ಎನ್ನಿಸಲಿಲ್ಲ.

* ನಿಮ್ಮ ಮೊದಲ ಕ್ರಶ್‌?

ಆಯ್ಯೋ ನಂಗೆ ಯಾರ ಮೇಲೂ ಕ್ರಶ್ ಆಗಿಲ್ಲಾ ರೀ, ಆದ್ರೆ ಕಾಲೇಜಿನಲ್ಲಿ  ಬಾಯ್‌ಫ್ರೆಂಡ್  ಇಲ್ಲ, ಕ್ರಶ್ ಇಲ್ಲಾ ಅಂದ್ರೆ ರೇಗಿಸುತ್ತಿದ್ದರು.   ‘ಅಯ್ಯೋ ನಿಂಗೆ ಯಾರ ಮೇಲೂ ಕ್ರಶ್ ಇಲ್ವಾ? ಸಿನಿಮಾದವರ ಮೇಲೂ ಕ್ರಶ್ ಇಲ್ವಾ ಅಂತಿದ್ರು’, ಹಾಗಾಗಿ ಮೇಲೆ ನಟ ಯಶ್ ಮೇಲೆ ಇಷ್ಟ ಆಗಿದೆ ಅಂತಿದ್ದೆ.

* ಯಾವ ನಟರೊಂದಿಗೆ ನಟಿಸುವಾಸೆ?

ಪುನೀತ್‌ ರಾಜ್‌ಕುಮಾರ್‌ ಜೊತೆ. ಅವರ ಡಾನ್ಸ್ ಇಷ್ಟ. ಹಾಗಾಗಿ ಅವರ ಜೊತೆಗೆ  ಆ್ಯಕ್ಟ್ ಮಾಡಬೇಕು, ಡ್ಯಾನ್ಸ್ ಮಾಡಬೇಕು ಅನ್ನುವ ಆಸೆ ಇತ್ತು. ದೇವರ ದಯೆ ಮೊದಲ ಸಿನಿಮಾನೇ ಪುನೀತ್ ಸರ್ ಜೊತೆ ಅಭಿನಯಿಸುವ ಅವಕಾಶ ದೊರೆಯಿತು

* ಆ್ಯಕ್ಟರ್ ಆಗದೇ ಇದ್ದಿದ್ರೆ?

ಪಿಯುಸಿಯಲ್ಲಿದ್ದಾಗ  ಡಾಕ್ಟರ್ ಆಗ್ಬೇಕು ಅಂತ ಆಸೆ ಇತ್ತು.  ನಂತರ  ನಟನಾ ಕ್ಷೇತ್ರ ಪ್ರವೇಶಿಸಿದೆ.  ಇಲ್ಲಿಗೆ ಬಂದ ಮೇಲೆ ಇನ್ನು ನಾನು ಡಾಕ್ಟರ್‌  ಆಗೋಕೆ ಆಗಲ್ಲ. ಆ್ಯಕ್ಟರ್ ಆಗ್ತೀನಿ ಅನಿಸ್ತು.  ಅಮ್ಮ ರಿಯಲ್‌ ಲೈಫ್‌ನಲ್ಲಿ ಡಾಕ್ಟರ್‌ ಆಗದೆ ಇದ್ರೆ ಏನಾಯ್ತು, ರೀಲ್ ಲೈಫ್‌ನಲ್ಲಿ ಡಾಕ್ಟರ್‌ ಆಗು ಎಂದು ಸಮಾಧಾನ ಮಾಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry