ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರು ಮಾಂಸಾಹಾರ ತ್ಯಜಿಸಬೇಕು: ಆರ್‍ಎಸ್‍ಎಸ್ ನೇತಾರ ಇಂದ್ರೇಶ್ ಕುಮಾರ್

Last Updated 6 ಜೂನ್ 2017, 9:50 IST
ಅಕ್ಷರ ಗಾತ್ರ

ನವದೆಹಲಿ:  ಆದಿ ಪ್ರವಾದಿ ಆದಂನಿಂದ ಕೊನೆಯ ಪ್ರವಾದಿವರೆಗೆ ಅಷ್ಟೇ ಯಾಕೆ ಪ್ರವಾದಿ ಮುಹಮ್ಮದ್‍ ಪತ್ನಿ ಆಯೇಷಾ ಕೂಡಾ ಮಾಂಸ ಸೇವಿಸುತ್ತಿರಲಿಲ್ಲ, ಮಾಂಸ ಎಂಬುದು ರೋಗ, ಹಾಲು ಔಷಧಿ, ಅವರ ಉಪದೇಶಗಳ ಪ್ರಕಾರ ಪ್ರಾಣಿಗಳನ್ನು ಬಲಿಕೊಡುವವರು ಅದನ್ನು ತಿನ್ನೇಬೇಕು. ಮಾಂಸ ಸೇವನೆ ಎಂಬುದು ರೋಗ. ಇಫ್ತಾರ್ ನಂತರ ನೀಡುವ ಪಾನೀಯಗಳಲ್ಲಿ ಹಾಲು ಬಳಸಬೇಕು ಎಂದು ಆರ್‍ಎಸ್‍ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಆರ್‍ಎಸ್‍ಎಸ್‍ನ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್  (ಎಂಆರ್‍ಎಂ) ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಸಂಜೆ ಇಫ್ತಾರ್ ಕೂಟ ಆಯೋಜಿಸಿತ್ತು. ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಇಂದ್ರೇಶ್ ಕುಮಾರ್, ರಂಜಾನ್ ಸಮಯದಲ್ಲಿ ಮುಸ್ಲಿಮರು ಅವರವರ ಮನೆಯಲ್ಲಿ, ಮಸೀದಿ ಮತ್ತು ದರ್ಗಾಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಮಾತ್ರವಲ್ಲದೆ ಮನೆಯಲ್ಲಿ ತುಳಸಿ ಗಿಡ ನೆಡಬೇಕು. ತುಳಸಿಯನ್ನು ಅರೇಬಿಕ್‍ನಲ್ಲಿ ಜನ್ನತ್ ಕೀ ಝಾಡ್ ಎಂದು ಕರೆಯುತ್ತಾರೆ. ಇದರಿಂದ ಜನ್ನತ್ (ಸ್ವರ್ಗ) ಪ್ರಾಪ್ತಿಯಾಗುತ್ತದೆ.  ತಲಾಖ್ ಎಂಬುದು ಪಾಪ, ಇದನ್ನು ದೇವರು ಮೆಚ್ಚುವುದಿಲ್ಲ. ಹೀಗಿರುವಾಗ ತ್ರಿವಳಿ ತಲಾಖ್ ಎಂಬುದು ಮಹಾಪಾಪವಲ್ಲವೇ ಎಂದಿದ್ದಾರೆ ಇಂದ್ರೇಶ್.

ಇಫ್ತಾರ್ ಕೂಟ ಏರ್ಪಡಿಸಿದ್ದಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ
ಮುಸ್ಲಿಂ ರಾಷ್ಟ್ರೀಯ ಮಂಚ್ ಇಫ್ತಾರ್ ಕೂಟ ಏರ್ಪಡಿಸಿದ್ದಕ್ಕೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಹೇಳಿಕೆಯನ್ನು ಆರ್‍ಎಸ್ಎಸ್ ನೀಡುತ್ತಲೇ ಬಂದಿದೆ. ಇದೀಗ ಅವರು ಇಫ್ತಾರ್ ಕೂಟವನ್ನೂ ಆಯೋಜಿಸುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳನ್ನು ನಮ್ಮ ಕ್ಯಾಂಪಸ್‍ನಲ್ಲಿ ನಡೆಯಲು ಬಿಡುವುದಿಲ್ಲ ಎಂದು ಜಾಮಿಯಾ ವಿದ್ಯಾಲಯದ ವಿದ್ಯಾರ್ಥಿ ಇತ್ಮಾಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT