ಕಾಬೂಲ್‌: ಭಾರತೀಯ ರಾಯಭಾರಿ ನಿವಾಸದ ಸಮೀಪ ಬಿದ್ದ ರಾಕೆಟ್‌

7

ಕಾಬೂಲ್‌: ಭಾರತೀಯ ರಾಯಭಾರಿ ನಿವಾಸದ ಸಮೀಪ ಬಿದ್ದ ರಾಕೆಟ್‌

Published:
Updated:
ಕಾಬೂಲ್‌: ಭಾರತೀಯ ರಾಯಭಾರಿ ನಿವಾಸದ ಸಮೀಪ ಬಿದ್ದ ರಾಕೆಟ್‌

ಕಾಬೂಲ್‌: ಅಪ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ನಿವಾಸದ ಸಮೀಪದಲ್ಲೇ ಮಂಗಳವಾರ ರಾಕೆಟ್‌ ಬಿದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ರಾಯಭಾರಿ ಮನ್‌ಪ್ರೀತ್‌ ವೋರಾ ಅವರ ನಿವಾಸದ ಸಮೀಪ ಇರುವ ಟೆನಿಸ್‌ ಕ್ರೀಡಾಂಗಣದ ಪಕ್ಕದಲ್ಲೇ ರಾಕೆಟ್‌ ಬಿದ್ದಿದ್ದು ಭಾರೀ ಸದ್ದು ಕೇಳಿ ಬಂದಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ವಿದೇಶಿಯರು ಸೇರಿದಂತೆ ಗಣ್ಯ ವ್ಯಕ್ತಿಗಳು ವಾಸವಾಗಿದ್ದಾರೆ.

ಅಪರಿಚಿತ ಪ್ರದೇಶದಿಂದ ರಾಕೆಟ್‌ ಹಾರಿ ಬಂದಿದೆ ಎನ್ನಲಾಗಿದ್ದು ಈ ಬಗ್ಗೆ ಅಪ್ಘಾನಿಸ್ತಾನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಭಾರಿ ದಾಳಿ ನಡೆದ ಬೆನ್ನಲ್ಲೇ ಈ ರಾಕೆಟ್‌ ದಾಳಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry