ದಾವಣಗೆರೆ: ಇಬ್ಬರು ಯುವಕರಿಂದ ಬಾಲಕಿ ಮೇಲೆ ಅತ್ಯಾಚಾರ

7

ದಾವಣಗೆರೆ: ಇಬ್ಬರು ಯುವಕರಿಂದ ಬಾಲಕಿ ಮೇಲೆ ಅತ್ಯಾಚಾರ

Published:
Updated:
ದಾವಣಗೆರೆ: ಇಬ್ಬರು ಯುವಕರಿಂದ ಬಾಲಕಿ ಮೇಲೆ ಅತ್ಯಾಚಾರ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಜೋಳದಾಳ್ ಅರಣ್ಯ ಪ್ರದೇಶದಲ್ಲಿ 16 ವರ್ಷದ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರ ನಡೆಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ರಂಗನಾಥಪುರದ ರಮೇಶ್ ಹಾಗೂ ಅರುಣ್ ಅತ್ಯಾಚಾರ ನಡೆಸಿದ ಆರೋಪಿಗಳು.

ಜೋಳದಾಳ್ ಸಮೀಪದ ಅಮ್ಮನಗುಡ್ಡ ದೇವಸ್ಥಾನಕ್ಕೆ ಆರೋಪಿಗಳು ಬಾಲಕಿ ಜತೆ ಬಂದಿದ್ದರು. ಈ ಸಂದರ್ಭ ರಮೇಶ್ ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ದೃಶ್ಯವನ್ನು ಜತೆಗಿದ್ದ ಸ್ನೇಹಿತ ಅರುಣ್ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಬಳಿಕ ಬಾಲಕಿಗೆ ವಿಡಿಯೋ ತೋರಿಸಿ ಬಹಿರಂಗ ಮಾಡುವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಮೇಶನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry