ಛಾಯಾಚಿತ್ರ ಪ್ರದರ್ಶನ

7

ಛಾಯಾಚಿತ್ರ ಪ್ರದರ್ಶನ

Published:
Updated:
ಛಾಯಾಚಿತ್ರ ಪ್ರದರ್ಶನ

ಕೆಲವರು ವಿಭಿನ್ನ ರೀತಿಯ ಹವ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಏನನ್ನಾದರೂ ವಿಶಿಷ್ಟ ವಿನೂತನವಾಗಿ ಮಾಡಿ ಸಾಧಿಸಬೇಕೆಂಬ ಛಲ ಹೊಂದಿರುತ್ತಾರೆ. ಅದೇ ರೀತಿ ಬಹುಮುಖಿ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್ ಅಡಿಗ.

ಸುಪ್ರೀತ್ ಕರಾವಳಿಯ ಬೈಂದೂರಿನವರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಪ್ರೀತ್ ಸೆರೆಹಿಡಿದಿರುವ ಛಾಯಾಚಿತ್ರಗಳು ವಿಭಿನ್ನ ಅನುಭವ ಕೊಡುತ್ತವೆ. ಈ ಛಾಯಾಚಿತ್ರಗಳು ವಿಭಿನ್ನವಾಗಿದ್ದು, ಥಟ್ಟನೆ ನೋಡುಗರ ಗಮನ ಸೆಳೆಯುತ್ತವೆ. ಇವರ ಛಾಯಾಚಿತ್ರಗಳಲ್ಲಿ ಸಹಜತೆ, ಸೌಂದರ್ಯ ಎದ್ದು ಕಾಣುತ್ತದೆ. ಈ ಚಿತ್ರಗಳನ್ನು ವೀಕ್ಷಿಸಿದವರಿಗೆ ನೈಜವಾಗಿಯೂ ಆ ತಾಣದಲ್ಲಿಯೇ ವಿಹರಿಸುತ್ತಿದ್ದೇವೆನೋ ಎಂಬ ಭಾವ ಮೂಡದೇ ಇರದು.

ಪ್ರಾಕೃತಿಕ ಬೆಳಕು ರೂಪಗಳು, ಬಣ್ಣಗಳು ಅದರ ಸಂಯೋಜನೆ ಇವರ ಛಾಯಾಚಿತ್ರಗಳಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಅವರ ಆಯ್ದ ಛಾಯಾಚಿತ್ರಗಳ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

****

ರೀಫೋಕಲ್ ಛಾಯಾಚಿತ್ರ ಪ್ರದರ್ಶನ: ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಜೂನ್ 7ರಿಂದ 11ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ, ಪ್ರವೇಶ ಉಚಿತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry