ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಭಾರತದಲ್ಲಿ ಶೇ 98ರಷ್ಟು ಮಳೆ: ಭಾರತೀಯ ಹವಾಮಾನ ಇಲಾಖೆ

Last Updated 6 ಜೂನ್ 2017, 14:08 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಮಾನ್ಸೂನ್ ಭಾರತಕ್ಕೆ ವರದಾನವಾಗಲಿದ್ದು, ಸರಾಸರಿ ಶೇ. 98 ರಷ್ಟು ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಹವಾಮಾನ ಇಲಾಖೆ ನಿರ್ದೇಶಕ ಕೆ.ಜಿ ರಮೇಶ್ ಅವರು, ಈ ವರ್ಷದಲ್ಲಿ ಮಾನ್ಸೂನ್ ಮಾರುತಗಳು ತುಂಬಾ ಚುರುಕುಗೊಂಡಿದ್ದು,  ಮುಂಬೈ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳದಲ್ಲಿ  ಇದೇ ತಿಂಗಳ 13, 14ರಂದು ಹಾಗೂ ದೆಹಲಿಯಲ್ಲಿ ಈ ತಿಂಗಳ ಕೊನೆಯಲ್ಲಿ ಗೋವಾದಲ್ಲಿ ಜೂನ್ 8ರಂದು ಭಾರಿ ಮಳೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತದ ನೈರುತ್ಯ ಭಾಗದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತಮ ಮಳೆಯಾಗಲಿದೆ. ಜುಲೈನಲ್ಲಿ ಶೇ 96, ಆಗಸ್ಟ್‌ನಲ್ಲಿ ಶೇ 99ರಷ್ಟು ಮಳೆ  ಸುರಿಯಲಿದೆ. ಕೇರಳ ಹಾಗೂ ಈಶಾನ್ಯ ರಾಜ್ಯಗಳ ಇನ್ನಿತರೆ ಭಾಗಗಳಿಗೆ ಮಾನ್ಯೂನ್ ಪ್ರವೇಶವಾಗಿದೆ  ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT