ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಮಳೆ ಕೊರತೆ ಇರದು: ಹವಾಮಾನ ಇಲಾಖೆ

Last Updated 6 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷ ಮುಂಗಾರು ಮಳೆ ಕೊರತೆ ಆಗದು, ವಾಡಿಕೆಯಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್‌ನಿಂದ ಸೆಪ್ಟೆಂಬರ್‌ ತಿಂಗಳ ನಡುವಣ ಅವಧಿಯಲ್ಲಿ ಶೇ 98ರಷ್ಟು ಮಳೆ ಆಗಲಿದೆ ಎಂದು ಇಲಾಖೆ ಅಂದಾಜಿಸಿದೆ.

ನಾಲ್ಕು ವಲಯಗಳಲ್ಲಿ ಎಷ್ಟು ಮಳೆಯಾಗಬಹುದು ಎಂಬ ಪ್ರತ್ಯೇಕ ಮಾಹಿತಿಯನ್ನೂ ಇಲಾಖೆ ನೀಡಿದೆ. ಮಧ್ಯ ಭಾರತದಲ್ಲಿ ಶೇ 100ರಷ್ಟು ಮಳೆಯಾದರೆ ದಕ್ಷಿಣ ಭಾರತದಲ್ಲಿ ಶೇ 99ರಷ್ಟು ಮಳೆ ಬರಲಿದೆ. ಈಶಾನ್ಯ ಮತ್ತು ವಾಯವ್ಯ ಭಾರತದಲ್ಲಿ ಶೇ 96ರಷ್ಟು ಮಳೆಯಾಗಲಿದೆ.

ಆರು ವಾರಗಳ ಹಿಂದೆ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಲ್ಲಿ ಈ  ಬಾರಿ ಶೇ 96ರಷ್ಟು ಮಳೆ ಆಗಲಿದೆ ಎಂದು ತಿಳಿಸಿತ್ತು. ಆದರೆ ಮುಂಗಾರು ಮಳೆಗೆ ಪೂರಕವಾದ ವಾತಾವರಣ ಇಡೀ ವರ್ಷ ಮುಂದುವರಿಯಲಿದೆ. ಹಾಗಾಗಿ ಮಳೆ ಪ್ರಮಾಣ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

2 ದಿನದಲ್ಲಿ ಬೆಂಗಳೂರಿಗೆ
ಅರಬ್ಬಿ ಸಮುದ್ರದ ಕೆಲವು ಭಾಗಗಳಲ್ಲಿ ಗಾಳಿಯ ಒತ್ತಡ ತೀರಾ ಕುಸಿದಿತ್ತು. ಹಾಗಾಗಿ ಮುಂಗಾರು ಮಾರುತ ಸ್ಥಗಿತಗೊಂಡಿತ್ತು. ಆದರೆ ಮಂಗಳವಾರ ಮಾರುತ ಚಲಿಸಲು ಆರಂಭಿಸಿದೆ. ಹಾಗಾಗಿ ಮುಂದಿನ 2–3 ದಿನಗಳಲ್ಲಿ ಅದು ಬೆಂಗಳೂರು ತಲುಪಲಿದೆ.

ಚೆನ್ನೈಯಲ್ಲಿ ಮಳೆ
ಚೆನ್ನೈ ಸೇರಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆ ಇದೆ.

* ಕಳೆದ 50 ವರ್ಷಗಳ ಲೆಕ್ಕಾಚಾರ ಪ್ರಕಾರ ವಾರ್ಷಿಕ ಸರಾಸರಿ ಮಳೆ 890 ಮಿ.ಮೀ.

* ಈ ಬಾರಿ ಅತಿಯಾದ ಮಳೆ ಅಥವಾ ಮಳೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗದು

* ಜುಲೈಯಲ್ಲಿ ವಾಡಿಕೆಯ ಶೇ 96ರಷ್ಟು ಮತ್ತು ಆಗಸ್ಟ್‌ನಲ್ಲಿ ಶೇ 99ರಷ್ಟು ಮಳೆ ಆಗಲಿದೆ

* ಶೇ 8ರಷ್ಟು ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆ ಇದೆ

* ಹವಾಮಾನದ 6 ಮಾನದಂಡಗಳು ಮತ್ತು ಇಲಾಖೆಯ ವಿಶಿಷ್ಟ ಮಾದರಿ ಬಳಸಿ ಮಳೆ ಪ್ರಮಾಣ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT