ಅಪಘಾತ: ಮುಧೋಳ ಗವಿಮಠ ಸ್ವಾಮೀಜಿ ಸಾವು

7

ಅಪಘಾತ: ಮುಧೋಳ ಗವಿಮಠ ಸ್ವಾಮೀಜಿ ಸಾವು

Published:
Updated:
ಅಪಘಾತ: ಮುಧೋಳ ಗವಿಮಠ ಸ್ವಾಮೀಜಿ ಸಾವು

ಮುಧೋಳ (ಬಾಗಲಕೋಟೆ ಜಿಲ್ಲೆ): ಇಲ್ಲಿನ ಗವಿಮಠದ ಮೃತ್ಯುಂಜಯ ಸ್ವಾಮೀಜಿ (65) ಮಂಗಳವಾರ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅವರು ಹುಬ್ಬಳ್ಳಿಯಿಂದ ವಿಜಯಪುರ– ಬೆಳಗಾವಿ ಹೆದ್ದಾರಿ ಮಾರ್ಗವಾಗಿ ಮುಧೋಳಕ್ಕೆ ಬರುತ್ತಿದ್ದರು. ಈ ವೇಳೆ, ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡಲಾಗಿ ದೊಡ್ಡ ಹಾವೊಂದು ಹರಿದು ಬರುತ್ತಿತ್ತು ಎನ್ನಲಾಗಿದ್ದು, ಅದನ್ನು ಉಳಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವು ಹೆದ್ದಾರಿಯಿಂದ ಪಕ್ಕಕ್ಕೆ  ಪಲ್ಟಿಯಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸ್ವಾಮೀಜಿಯವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬೆಳಗಿನ ಹತ್ತೂವರೆ ಗಂಟೆಗೆ ಮೃತಪಟ್ಟರು.

ಕಾರು ಚಾಲಕ ಅನ್ವೇಶ ಪುರಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಧೋಳದಲ್ಲಿ ಸಂಜೆ ನಡೆದ ಸ್ವಾಮೀಜಿಯವರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry