ಸೆಮಿಗೆ ಬೋಪಣ್ಣ ಜೋಡಿ

7
ಸಿಂಗಲ್ಸ್‌ ಪಂದ್ಯಗಳಿಗೆ ಮಳೆ ಅಡ್ಡಿ

ಸೆಮಿಗೆ ಬೋಪಣ್ಣ ಜೋಡಿ

Published:
Updated:
ಸೆಮಿಗೆ ಬೋಪಣ್ಣ ಜೋಡಿ

ಪ್ಯಾರಿಸ್‌ : ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಬೋಪಣ್ಣ ಮತ್ತು ಗೇಬ್ರಿಯೆಲಾ 6–3, 6–4ರ ನೇರ ಸೆಟ್‌ಗಳಿಂದ ಭಾರತದ ಸಾನಿಯಾ ಮಿರ್ಜಾ ಮತ್ತು ಕ್ರೊವೇಷ್ಯಾದ ಇವಾನ್‌ ದೊಡಿಗ್‌ ಅವರನ್ನು ಮಣಿಸಿದರು.

52 ನಿಮಿಷಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಸಾನಿಯಾ ಮತ್ತು ಇವಾನ್‌ ದಿಟ್ಟ ಆಟ ಆಡಲು ವಿಫಲರಾದರು.

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಆ್ಯಂಡ್ರಿಯಾ ಲಾವಕೊವಾ ಮತ್ತು  ಎಡೌರ್ಡ್‌ ರೋಜರ್‌ ವೆಸೆಲಿನ್‌ ಅವರು   7–6, 6–3ರ ನೇರ ಸೆಟ್‌ ಗಳಿಂದ ಆ್ಯಂಡ್ರೆಜಾ ಕ್ಲೆಪಾಕ್‌ ಮತ್ತು  ಡೊಮಿನಿಕ್‌ ಇಂಗ್ಲಾಟ್‌ ಅವರನ್ನು ಪರಾಭವ ಗೊಳಿಸಿದರು.

ಸಿಂಗಲ್ಸ್‌ ಪಂದ್ಯಗಳಿಗೆ ಮಳೆ ಅಡ್ಡಿ: ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಿಗೆ ಮಳೆ ಅಡ್ಡಿಯಾ ಯಿತು. ಬಿರುಗಾಳಿ ಮತ್ತು ಧಾರಾಕಾರ ಮಳೆಯ ಕಾರಣ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಮುಂದೂಡಲಾಯಿತು.

ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಪ್ಯಾಬ್ಲೊ ಕರೆನೊ ಬುಸ್ಟಾ ಹಾಗೂ ಎರಡನೇ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಆಸ್ಟ್ರಿಯಾದ ಡೊಮಿನಿಕ್‌ ಥಿಯೆಮ್‌ ಅವರು ಆಡಬೇಕಿತ್ತು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಫ್ರಾನ್ಸ್‌ನ  ಕ್ರಿಸ್ಟಿನಾ ಮ್ಲಾಡೆನೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಟೈಮಿ ಬ್ಯಾಕ್‌ಸಿಂಜಿಕಿ ಅವರು ಎದುರಾಗಿದ್ದರು. ಕ್ರಿಸ್ಟಿನಾ 6–4, 1–1 ರಿಂದ ಮುನ್ನಡೆ ಹೊಂದಿದ್ದ ವೇಳೆ ವರುಣನ ಆಟ ನಡೆಯಿತು.

ಕ್ಯಾರೊಲಿನಾ ವೋಜ್ನಿಯಾಕಿ ಮತ್ತು  ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ನಡುವಣ ಪಂದ್ಯವೂ ಪೂರ್ಣಗೊಳ್ಳಲಿಲ್ಲ. ಈ ಪಂದ್ಯದಲ್ಲಿ ಡೆನ್ಮಾರ್ಕ್‌ನ ವೋಜ್ನಿ ಯಾಕಿ 6–4, 2–5ರಿಂದ ಮುಂದಿದ್ದ ವೇಳೆ ಮಳೆ ಸುರಿಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry