ಗದಗದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ 11ರಂದು

7

ಗದಗದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ 11ರಂದು

Published:
Updated:
ಗದಗದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ 11ರಂದು

ಬೆಂಗಳೂರು: ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ 2017ರ ಸಾಲಿನ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆ ಗದಗದಲ್ಲಿ ಜೂನ್‌ 11ರಂದು ನಡೆಯಲಿದೆ.

ಪುರುಷರ ವಿಭಾಗದಲ್ಲಿ 12 ಕಿ.ಮೀ. ಮತ್ತು ಮಹಿಳಾ ವಿಭಾಗದಲ್ಲಿ 6 ಕಿ.ಮೀ. ಓಟದ ಸ್ಪರ್ಧೆ ಇದ್ದರೆ, 16 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ 2.5 ಕಿ.ಮೀ. ದೂರದ ಸ್ಪರ್ಧೆ ಇರುತ್ತದೆ.

ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಪಂಚಾಚಾರ್ಯ ಮಾಂಗಲ್ಯ ಮಂದಿರದ ಬಳಿ ಸ್ಪರ್ಧೆ ಆರಂಭವಾಗುತ್ತದೆ. ಅಲ್ಲಿಂದ ಓಟಗಾರರು ಎಪಿಎಂಸಿ ರಸ್ತೆಯಲ್ಲಿ ಸಾಗಿ, ಸಂಬಾಪುರ ರಸ್ತೆಗೆ ಸೇರಿ ಅದೇ ರಸ್ತೆಯಲ್ಲಿ ನಿರ್ದಿಷ್ಟ ಸ್ಥಳದವರೆಗೆ ಓಡಬೇಕಾಗುತ್ತದೆ.

ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಗೆದ್ದವರಿಗೆ ಕ್ರಮವಾಗಿ ₹ 5,000, ₹3,500, ₹2,500, ₹1,500, ₹650 ಮತ್ತು ₹ 500 ನಗದು ಬಹುಮಾನ ನೀಡಲಾಗುವುದು. ಕ್ರಮವಾಗಿ ಏಳರಿಂದ ಹತ್ತರವರೆಗಿನ ಸ್ಥಾನದಲ್ಲಿ ಗುರಿ ತಲುಪಿದವರು ತಲಾ ₹350 ಪಡೆಯಲಿದ್ದಾರೆ.

ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ  ಮೊದಲ ಮೂರು ಸ್ಥಾನಗಳನ್ನು ಪಡೆಯುವವರು ಕ್ರಮ ವಾಗಿ ₹1,500, ₹1,000 ಮತ್ತು ₹750  ನಗದು ಬಹುಮಾನ ನೀಡಲಾಗುವುದು.  ನಂತರದ ಏಳು ಸ್ಥಾನಗಳನ್ನು ಪಡೆದವರಿಗೆ ಅರ್ಹತಾ ಪತ್ರಗಳನ್ನು ನೀಡಲಾಗುವುದು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧಿಸುವವರು ಜನ್ಮದಿನಾಂಕವನ್ನು ದೃಢೀಕರಿಸುವ ಅಧಿಕೃತ ದಾಖಲೆಪತ್ರವನ್ನು ನೋಂದಣಿಯ ಸಂದರ್ಭದಲ್ಲಿ ಸಂಘಟಕರಿಗೆ ತೋರಿಸಬೇಕು. ಬಾಲಕ ಬಾಲಕಿಯರ ವಿಭಾಗದಲ್ಲಿ ಭಾಗವಹಿಸುವವರು 30–6–2001ರ ನಂತರ ಜನಿಸಿದವರಾಗಿರಬೇಕು. ದೂರದಿಂದ ಬರುವ ಸ್ಪರ್ಧಿಗಳಿಗೆ ಉಚಿತ ವಸತಿ ವ್ಯವಸ್ಥೆ ಇರುತ್ತದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಜೂನ್‌ 10ರಂದು ಮಧ್ಯಾಹ್ನ 3.00 ಗಂಟೆಯ ಮೇಲೆ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಚೆಸ್ಟ್‌ ನಂಬರ್‌ಗಳನ್ನು ಪಡೆದುಕೊಳ್ಳಬೇಕು.  ಹೆಚ್ಚಿನ ವಿವರಗಳಿಗೆ ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆ: 080–22275656.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry