ಗುರುವಾರ , ಮೇ 26, 2022
30 °C

ನಾಲ್ಕನೆಯ ಬಾರಿ ಪ್ರಧಾನಿಯಾಗಿ ಶೇರ್‌ ಬಹದ್ದೂರ್‌ ದೇವುಬಾ

ಪಿಟಿಐ Updated:

ಅಕ್ಷರ ಗಾತ್ರ : | |

ನಾಲ್ಕನೆಯ ಬಾರಿ ಪ್ರಧಾನಿಯಾಗಿ ಶೇರ್‌ ಬಹದ್ದೂರ್‌ ದೇವುಬಾ

ಕಠ್ಮಂಡು: ನೇಪಾಳದ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹಾದ್ದೂರ್‌ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ವಿರೋಧ ಪಕ್ಷ ಯುಎಂಎಲ್‌ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, 70 ವರ್ಷದ ಶೇರ್‌ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು.

593 ಸಂಸತ್‌ ಸದಸ್ಯರ ಪೈಕಿ 558 ಮಂದಿ ಮತಚಲಾಯಿಸಿದರು.ಶೇರ್‌ ಬಹದ್ದೂರ್ ಅವರು ಜಯಗಳಿಸಲು 297 ಮತಗಳು ಸಾಕಿತ್ತು. ಆದರೆ ಅವರು 388 ಮತ ಪಡೆದಿದ್ದಾರೆ.

1995–1997, 2001–2002, 2004–2005ರವರೆಗೆ ಪ್ರಧಾನಿಯಾಗಿದ್ದ  ಶೇರ್‌ ಬಹದ್ದೂರ್ ಇದೀಗ ನೇಪಾಳದ 40ನೇ ಪ್ರಧಾನಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.