ರೈಲ್ವೆ ಕೆಳಸೇತುವೆ: ಸ್ಥಳ ಪರಿಶೀಲನೆ

7
ನಾಯಂಡನಹಳ್ಳಿ – ತಿಗಳಪಾಳ್ಯ ಮಾರ್ಗ

ರೈಲ್ವೆ ಕೆಳಸೇತುವೆ: ಸ್ಥಳ ಪರಿಶೀಲನೆ

Published:
Updated:
ರೈಲ್ವೆ ಕೆಳಸೇತುವೆ: ಸ್ಥಳ ಪರಿಶೀಲನೆ

ಬೆಂಗಳೂರು: ನಾಯಂಡನಹಳ್ಳಿಯಿಂದ ತಿಗಳಪಾಳ್ಯಕ್ಕೆ ಸಂಪರ್ಕಿಸುವ ರೈಲ್ವೆ ಕೆಳಸೇತುವೆ ಕಾಮಗಾರಿಗಾಗಿ ದಕ್ಷಿಣ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ರೈಲ್ವೆ ಗೇಟ್ ಇಲ್ಲದೆ ಜನರು ಹಳಿ ದಾಟಿಕೊಂಡು ಹೋಗುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಇದನ್ನು ತಪ್ಪಿಸಲು ಕೆಳಸೇತುವೆ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು.

ಸ್ಥಳ ಪರಿಶೀಲನೆಯಲ್ಲಿ ಭಾಗವಹಿಸಿದ್ದ ರೈಲ್ವೆ ಇಲಾಖೆ ಡಿ.ಜಿ.ಎಂ, ಆರ್.ಎಸ್. ಸಕ್ಸೇನಾ, ‘ತಿಂಗಳ ಒಳಗಾಗಿ ಸರ್ವೇ ಕಾರ್ಯ ಮುಗಿಯಲಿದ್ದು

ಆಗಸ್ಟ್ ಮೊದಲ ವಾರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೆಳಸೇತುವೆ ಮೂರು ಮೀಟರ್ ಅಗಲ ಇರಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry