ಆಹಾರ ಅವರವರ ಆಯ್ಕೆಗೆ ಸಂಬಂಧಪಟ್ಟದ್ದು, ನಾನು ಮಾಂಸಾಹಾರ ಸೇವಿಸುತ್ತೇನೆ

7

ಆಹಾರ ಅವರವರ ಆಯ್ಕೆಗೆ ಸಂಬಂಧಪಟ್ಟದ್ದು, ನಾನು ಮಾಂಸಾಹಾರ ಸೇವಿಸುತ್ತೇನೆ

Published:
Updated:
ಆಹಾರ ಅವರವರ ಆಯ್ಕೆಗೆ ಸಂಬಂಧಪಟ್ಟದ್ದು, ನಾನು ಮಾಂಸಾಹಾರ ಸೇವಿಸುತ್ತೇನೆ

ಮುಂಬೈ: ಗೋಮಾಂಸ ಸೇವನೆಯ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ, ಆಹಾರ ಅವರವರ ಆಯ್ಕೆಗೆ ಸಂಬಂಧಪಟ್ಟದ್ದು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಬಿಜೆಪಿ ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಮಾಡಲು ಇಚ್ಛಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಯಾವ ಆಹಾರವನ್ನು ಸೇವಿಸಬೇಕು ಎಂಬುದು ಅವರವರ ಆಯ್ಕೆಗೆ ಸಂಬಂಧಪಟ್ಟದ್ದು, ನಾನೂ ಮಾಂಸಾಹಾರ ಸೇವಿಸುತ್ತೇನೆ  ಎಂದಿದ್ದಾರೆ ನಾಯ್ಡು.

ಬಿಜೆಪಿ ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ  ಮಾಡುತ್ತಿದೆ ಎಂದು ರಾಜಕೀಯ ಪಕ್ಷವೊಂದು ಆರೋಪಿಸುತ್ತಿದೆ. ಈ ಬಗ್ಗೆ ಸುದ್ದಿ ವಾಹಿನಿಯಲ್ಲಿ ಚರ್ಚೆಗಳೂ ನಡೆದಿದ್ದವು.

ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು ನಾನು ಹೈದರಾಬಾದ್‍ನಲ್ಲಿ ಬಿಜೆಪಿ ಪಕ್ಷದ ಮುಖ್ಯಸ್ಥನಾಗಿದ್ದೆ. ನಾನು ಮಾಂಸಾಹಾರಿಯಾಗಿದ್ದರೂ ನಾನು ಪಕ್ಷದ ಅಧ್ಯಕ್ಷನಾದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹೆಚ್ಚಿನ ಬಿಜೆಪಿ ನಾಯಕರು ಸಸ್ಯಾಹಾರಿಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry