ನಾಗಾಲ್ಯಾಂಡ್ ಎನ್‍ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಸೇನಾಧಿಕಾರಿ ಹುತಾತ್ಮ

7

ನಾಗಾಲ್ಯಾಂಡ್ ಎನ್‍ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಸೇನಾಧಿಕಾರಿ ಹುತಾತ್ಮ

Published:
Updated:
ನಾಗಾಲ್ಯಾಂಡ್ ಎನ್‍ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಸೇನಾಧಿಕಾರಿ ಹುತಾತ್ಮ

ಗುವಾಹಟಿ:  ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಲಪ್ಪಾ ಎಂಬಲ್ಲಿ  ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಎನ್‍ಕೌಂಟರ್‍‍ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಉಗ್ರರ ವಿರುದ್ಧದ ದಾಳಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಂಗಳವಾರ ರಾತ್ರಿ 10 ಗಂಟೆಗೆ ಎನ್‍ಕೌಂಟರ್ ನಡೆದಿತ್ತು. ಈ ವೇಳೆ ಅಲ್ಲಿನ ಸ್ಥಳೀಯರೊಬ್ಬರು ಹತ್ಯೆಗೀಡಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಸ್ಥಳೀಯ ವ್ಯಕ್ತಿ ಹತ್ಯೆಗೀಡಾಗಿರುವ ಬಗ್ಗೆ ಸೇನಾ ಮೂಲಗಳು ಯಾವುದೇ ಹೇಳಿಕೆ ನೀಡಿಲ್ಲ.

ಹತ್ಯೆಗೀಡಾಗಿರುವ ಉಗ್ರರು ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ (ಕಲ್ಪಾಂಗ್) ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್  (ಸ್ವತಂತ್ರ) ಸಂಘಟನೆಯವರು ಎಂದು ಹೇಳಲಾಗುತ್ತಿದೆ.

ಎನ್‍ಕೌಂಟರ್ ಮುಗಿದಿದ್ದು ಈಗಲೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ವಕ್ತಾರ ಲೆ. ಕರ್ನಲ್ ಚಿರಂಜೀತ್ ಕೊನ್ವಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry