ಪಾಕಿಸ್ತಾನವೂ ಸೇರಿ ವಿಶ್ವದ ವಿವಿಧೆಡೆ ಸೇನಾ ನೆಲೆ ಸ್ಥಾಪಿಸಲು ಮುಂದಾದ ಚೀನಾ

7

ಪಾಕಿಸ್ತಾನವೂ ಸೇರಿ ವಿಶ್ವದ ವಿವಿಧೆಡೆ ಸೇನಾ ನೆಲೆ ಸ್ಥಾಪಿಸಲು ಮುಂದಾದ ಚೀನಾ

Published:
Updated:
ಪಾಕಿಸ್ತಾನವೂ ಸೇರಿ ವಿಶ್ವದ ವಿವಿಧೆಡೆ ಸೇನಾ ನೆಲೆ ಸ್ಥಾಪಿಸಲು ಮುಂದಾದ ಚೀನಾ

ವಾಷಿಂಗ್ಟನ್: ಪಾಕಿಸ್ತಾನವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಚೀನಾ ಸೇನಾ ನೆಲೆಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ವರದಿಯಲ್ಲಿ ಹೇಳಲಾಗಿದೆ.

ಆಫ್ರಿಕಾದ ಜಿಬೌತಿಯಲ್ಲಿ ಸೇನಾ ನೆಲೆ ಸ್ಥಾಪಿಸಿರುವುದು ವಿಶ್ವದಾದ್ಯಂತ ಸೇನಾ ನೆಲೆ ಸ್ಥಾಪಿಸುವ ನಿಟ್ಟಿನಲ್ಲಿ ಚೀನಾ ಇಟ್ಟಿರುವ ಮೊದಲ ಹೆಜ್ಜೆ. ಇದನ್ನು ಇತರ ಮಿತ್ರ ರಾಷ್ಟ್ರಗಳಿಗೂ ಚೀನಾ ವಿಸ್ತರಿಸಲಿದೆ. ಮುಂದಿನ ಹಂತದಲ್ಲಿ ಪಾಕಿಸ್ತಾನದಲ್ಲಿ ಸೇನಾ ನೆಲೆ ಸ್ಥಾಪಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ದ್ವೀಪಗಳಲ್ಲಿ ಸೇನಾ ಸೌಕರ್ಯಗಳನ್ನು ಹೆಚ್ಚಿಸಲು, ರನ್‌ವೇಗಳನ್ನು ನಿರ್ಮಾಣ ಮಾಡಲು ಚೀನಾ ಸೇನೆ ಆದ್ಯತೆ ನೀಡಿದೆ ಎನ್ನಲಾಗಿದೆ.

ಜಿಬೌತಿಯಲ್ಲಿ ಚೀನಾ ಸ್ಥಾಪಿಸಿರುವ ಸೇನಾ ನೆಲೆ ಅಮೆರಿಕದ ಸೇನಾ ನೆಲೆಗೆ ಸಮೀಪದಲ್ಲಿದೆ. ಆದರೆ, ಇದರಿಂದ ತಮಗೆ ಯಾವುದೇ ಭೀತಿ ಇಲ್ಲ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

‘ಮಿತ್ರ ರಾಷ್ಟ್ರಗಳ ಬಂದರುಗಳಿಗೆ ಚೀನಾ ನೌಕೆಗಳನ್ನು ಕಳುಹಿಸುತ್ತಿದೆ. ಜತೆಗೆ ಸೇನಾ ನೆಲೆಗಳನ್ನೂ ಸ್ಥಾಪಿಸಲು ಮುಂದಾಗುತ್ತಿರುವುದು ಚೀನಾದ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನ, ಆಫ್ಘಾನಿಸ್ತಾನದಂಥ ರಾಷ್ಟ್ರಗಳ ಜತೆ ರೈಲು, ರಸ್ತೆ ಸಂಪರ್ಕಕ್ಕೆ ಚೀನಾ ಹೆಚ್ಚಿನ ಆದ್ಯತೆ ನೀಡಿದೆ. ಇದು, ಭಾರತ ಮತ್ತು ಇತರ ಕೆಲವು ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry