ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲತೆಯಿಂದ ಮುಪ್ಪು ಮುಂದೂಡಿಕೆ

Last Updated 7 ಜೂನ್ 2017, 7:39 IST
ಅಕ್ಷರ ಗಾತ್ರ

ಬಾದಾಮಿ: ನಿವೃತ್ತಿ ನಂತರ ಚಿಂತೆ ಮಾಡಬಾರದು. ಆರೋಗ್ಯದಿಂದ ಇರಲು ನೆಮ್ಮದಿಯಿಂದ ಇರಬೇಕು ಎಂದು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ನಿವೃತ್ತ ವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಹೇಳಿದರು. ಇಲ್ಲಿನ ತಾಲ್ಲೂಕು ಘಟಕದ ನಿವೃತ್ತ ನೌಕರರ ಸಂಘದಿಂದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಮಂಗಳವಾರ ನಡೆದ 80 ವಯಸ್ಸಿನ ಹಿರಿಯ ನಿವೃತ್ತ ನೌಕರರಿಗೆ ಅವರು ಸನ್ಮಾನಿಸಿ ನಿವೃತ್ತ ನೌಕರರ ಆರೋಗ್ಯ ಕುರಿತು ಮಾತನಾಡಿದರು.

ನಿವೃತ್ತಿಯಾದ ನಂತರ ಬದುಕೇ ಮುಗಿದು ಹೋಯಿತು  ಎಂದು ಕೆಲವರು ಮಾನಸಿಕ ಆಘಾತಕ್ಕೆ ಒಳಗಾಗುವರು. ಇದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಾಧ್ಯ.  ಆರೋಗ್ಯ ವಿಲ್ಲದಿದ್ದರೆ ಆಯುಷ್ಯವು ಶಾಪವಿದ್ದಂತೆ. ಜೀವನದಲ್ಲಿ ನೆಮ್ಮದಿಯ ಬದುಕು ಆರೋಗ್ಯವು ಹೆಚ್ಚಿಸುತ್ತದೆ. ಸದಾ ಕ್ರಿಯಾ ಶೀಲರಾಗಿ ನಗು ನಗುತ್ತ  ಬಾಳಿದರೆ ಮುಪ್ಪು ಮರಣವನ್ನು ಮುಂದೂಡುತ್ತದೆ  ಎಂದು ಆತ್ಮವಿಶ್ವಾಸ ತುಂಬಿದರು.

ಡಾ.ಸಿ.ಆರ್‌.ಚಂದ್ರಶೇಖರ್‌  ಆರೋಗ್ಯದ ಬಗ್ಗೆ ಗಣಕಯಂತ್ರದ ಮೂಲಕ ತೋರಿಸುತ್ತ ನಿವೃತ್ತ ನೌಕರರಿಗೆ ಪ್ರಶ್ನೆಗಳನ್ನು ಕೇಳುತ್ತ ಸರಿ ಉತ್ತರ ಕೊಟ್ಟವರಿಗೆ ಅವರು ಹಣ್ಣುಗಳನ್ನು ಬಹು ಮಾನವಾಗಿ  ನೀಡಿದರು. ಇದೇ ಸಂದರ್ಭದಲ್ಲಿ ಡಾ ಸಿ.ಆರ್‌. ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾ ಯಿತು. ನಿವೃತ್ತ ಹಿರಿಯ ನೌಕರರಾದ ಬಿ.ಪಿ. ಕೋಟಿ, ವಿ.ಎಸ್‌. ಕಟಗೇರಿ, ಡಾ. ಎಸ್‌.ಎನ್‌.ಸಂಗಮ, ಎಸ್.ವಿ. ಪಟ್ಟಣ ಶೆಟ್ಟಿ, ಎನ್‌.ಎನ್‌. ಜೋಶಿ, ಎಸ್‌.ವಿ. ಹಳ್ಳೂರ, ಬಿ.ಎಂ. ತಾಳಿಕೋಟಿ, ಎಸ್‌.ಐ. ಜಾಲಿಹಾಳ, ಎನ್‌.ಎಸ್‌. ಜೋಳದ, ಪಿ.ವೈ. ಪೂಜಾರ ಅವರನ್ನು ನಿವೃತ್ತ   ನೌಕರರ ಸಂಘದಿಂದ ಸನ್ಮಾನಿಸಲಾಯಿತು.

ನಿವೃತ್ತ ನೌಕರ ಸಂಘದ ಅಧ್ಯಕ್ಷ ಡಿ.ಎಂ.ಪೈಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಬಿ. ಇಟಗಿ, ವೀರ ಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾ ಧ್ಯಕ್ಷ ಎ.ಸಿ.ಪಟ್ಟಣದ, ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕ ಮೊಹಶೀನ್‌ ಬೇಗ್‌, ಯೂನಿಯನ್‌ ಬ್ಯಾಂಕ್‌ ವ್ಯವಸ್ಥಾಪಕ ಸಚಿನ ಸೋನಾವಾನೆ, ಪತ್ರಾಂಕಿತ ಅಧಿಕಾರಿ ಟಿ.ಎಂ.ಬನ್ನಿದಿನ್ನಿ ಇದ್ದರು. ನಿವೃತ್ತ ಮುಖ್ಯಶಿಕ್ಷಕ ಎಸ್‌.ಎಂ. ಹಿರೇಮಠ ಸ್ವಾಗತಿಸಿದರು. ನಿವೃತ್ತ ನೌಕ ರರ ಸಂಘದ ಕಾರ್ಯದರ್ಶಿ ವಿಜಯ ರಾವ್‌ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಐ. ಬಾರಾವಲಿ ವಂದಿಸಿದರು.

* * 

ಮಹಿಳೆಯರು ತಾಳ್ಮೆ, ಕ್ಷಮಾ ಗುಣದಿಂದ ಹೆಚ್ಚು ಆಯುಷ್ಯ ಬಾಳುವವರು. ಅವರಂತೆ ಪುರುಷರೂ ಸಹ ತಾಳ್ಮೆಯಿಂದ ಬದುಕಿದರೆ ಜೀವನ ಅರ್ಥಪೂರ್ಣ
ಡಾ. ಸಿ.ಆರ್‌. ಚಂದ್ರಶೇಖರ್‌
ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT