ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಮುಚ್ಚಿದ್ದೇ ಸಮಸ್ಯೆಗೆ ಕಾರಣ

Last Updated 7 ಜೂನ್ 2017, 8:52 IST
ಅಕ್ಷರ ಗಾತ್ರ

ಮಂಗಳೂರು: ನಗರದ ಜ್ಯೋತಿ ವೃತ್ತದ (ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ) ಬಸ್‌ ನಿಲುಗಡೆ ತಾಣದ ಬಳಿ ಇದ್ದ ಚರಂ ಡಿಯನ್ನು ಮುಚ್ಚಿ ಅದರ ಮೇಲೆ ಪಾದ ಚಾರಿ ಮಾರ್ಗ ನಿರ್ಮಾಣ ಮಾಡಿರು ವುದೇ ಮಳೆ ಸುರಿದಾಗ ರಸ್ತೆ ಜಲಾವೃತ ವಾಗಲು ಕಾರಣವಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಚರಂಡಿಯನ್ನು ಮರುನಿರ್ಮಾಣ ಮಾಡುವ ಕೆಲಸಕ್ಕೆ ಮಂಗಳೂರು ಮಹಾನಗರ ಪಾಲಿಕೆ ಚಾಲನೆ ನೀಡಿದೆ.

ಸೋಮವಾರ ಮಧ್ಯಾಹ್ನದಿಂದ ಸುರಿದ ಮಳೆಗೆ ಜ್ಯೋತಿ ವೃತ್ತದಿಂದ ಕಲೆ ಕ್ಟರ್ಸ್‌ ಗೇಟ್‌ ವೃತ್ತದ ಕಡೆಗೆ ಬರುವ ಮಾರ್ಗದ ರಸ್ತೆ ಸಂಪೂರ್ಣವಾಗಿ ಜಲಾ ವೃತವಾಗಿತ್ತು. ಇದರಿಂದ ಗಂಟೆಗಟ್ಟಲೆ ವಾಹನದಟ್ಟಣೆ ಉಂಟಾಗಿತ್ತು.

ಮಳೆಗಾಲ ಎದುರಿಸಲು ರಚಿಸಿರುವ ಕಾರ್ಮಿ ಕರ ತಂಡದೊಂದಿಗೆ ರಾತ್ರಿ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ರಸ್ತೆಯ ಮೇಲಿದ್ದ ನೀರನ್ನು ಹೊರಹಾಕಲು ಮಾರ್ಗವೇ ಇಲ್ಲದೆ ಸುಸ್ತು ಹೊಡೆದರು. ಮಳೆಯ ನೀರನ್ನು ಚರಂಡಿಗೆ ಹರಿಸಲು ಪ್ರಯತ್ನ ಆರಂಭಿಸಿದಾಗ ಅಲ್ಲಿ ಚರಂಡಿ ಮುಚ್ಚಿ ಪಾದಚಾರಿ ಮಾರ್ಗ ನಿರ್ಮಿಸಿರುವುದು ಗೊತ್ತಾಗಿದೆ.

‘ಮಳೆಯ ನೀರು ಚರಂಡಿ ಸೇರಲು ಅವಕಾಶ ಇಲ್ಲದಿರುವುದೇ ಸಮಸ್ಯೆಗೆ ಕಾರಣ. ಸೋಮವಾರ ಸಂಜೆ ನಾವು ಸ್ಥಳಕ್ಕೆ ಹೋದ ಮೇಲೆ ಅಲ್ಲಿ ಚರಂಡಿ ಮುಚ್ಚಿರುವುದು ಗೊತ್ತಾಯಿತು. ಎರಡು ಜೆಸಿಬಿಗಳನ್ನು ಬಳಸಿ ಚರಂಡಿಗೆ ಮುಚ್ಚಿದ್ದ ಇಂಟರ್‌ಲಾಕ್‌ ಮತ್ತು ಮರ ಳನ್ನು ತೆರವು ಮಾಡಲಾಯಿತು.

ರಸ್ತೆ ಯಲ್ಲಿ ನಿಂತಿದ್ದ ನೀರನ್ನು ಹೊರಹಾಕುವ ಕೆಲಸ ಮುಗಿದಾಗ ತಡರಾತ್ರಿ 2 ಗಂಟೆ ಯಾಗಿತ್ತು. ಮಂಗಳವಾರ ಪುನಃ ಜ್ಯೋತಿ ವೃತ್ತದಲ್ಲಿ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆದು, ಸಾಗಿಸಲಾಗಿದೆ’ ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುರಾಜ್‌ ಮರಳಿಹಳ್ಳಿ ತಿಳಿಸಿದರು.

ಜ್ಯೋತಿ ವೃತ್ತದ ಬಸ್‌ ನಿಲ್ದಾಣದ ಬಳಿ ಪೂರ್ಣ ಪ್ರಮಾಣದ ಚರಂಡಿ ನಿರ್ಮಾಣ ಮಾಡಲು ಪಾಲಿಕೆ ನಿರ್ಧರಿ ಸಿದೆ. ಹಳೆಯ ಚರಂಡಿಯಲ್ಲಿ ತುಂಬಿದ್ದ ಮಣ್ಣನ್ನು ತೆರವು ಮಾಡುವ ಕೆಲಸ ಮುಂದುವರಿದಿದೆ. ಇನ್ನೂ ಒಂದೆರಡು ದಿನ ಮಳೆ ಸುರಿದು, ರಸ್ತೆಯ ನೀರು ಸರಾಗವಾಗಿ ಚರಂಡಿ ತಲುಪುವಂತಾ ದರೆ ಈ ಸಮಸ್ಯೆಗೆ ತಕ್ಷಣದ ಪರಿಹಾರ ದೊರೆಯುತ್ತದೆ ಎಂದರು.

ಮತ್ತಷ್ಟು ಕಡೆ ತೆರವು:
ಪಾಂಡೇಶ್ವರ, ಬಂದರು ಪ್ರದೇಶದ ಅಜೀಜುದ್ದೀನ್‌ ರಸ್ತೆ, ಕರಾವಳಿ ಮೈದಾನ ವೃತ್ತ, ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಸೇರಿದಂತೆ ನಗರದ ಹಲವು ಸ್ಥಳಗಳಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕುರಿತು ಸಂಚಾರ ಪೊಲೀಸರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದಾರೆ. ಪಾಂಡೇಶ್ವರ ಮತ್ತು ಬಂದರು ಪ್ರದೇಶದಲ್ಲೂ ಪಾಲಿಕೆಯ ವಿಶೇಷ ತಂಡಗಳು ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಹೊರಕ್ಕೆ ಸಾಗಿಸಿವೆ.

ಮೇಯರ್‌ ಕವಿತಾ ಸನಿಲ್‌ ಮಂಗಳವಾರ ನಗರದ ವಿವಿಧ ಸ್ಥಳಗಳಿಗೆ ಭೇಟಿನೀಡಿ ಮಳೆನೀರು ರಸ್ತೆಯ ಮೇಲೆ ನಿಂತು ಉಂಟಾಗಿದ್ದ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು. ತಕ್ಷಣವೇ ನಗರದ ಎಲ್ಲ ಕಡೆಗಳಲ್ಲಿ ಮಳೆನೀರು ಚರಂಡಿ ತಲುಪಲು ಇರುವ ಅಡಚಣೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT