ಬಲಿಗೆ –ಮೆಣಸಿನಹಾಡ್ಯ ಬಸ್‌ ಸಂಚಾರ ವಿಫಲ

7

ಬಲಿಗೆ –ಮೆಣಸಿನಹಾಡ್ಯ ಬಸ್‌ ಸಂಚಾರ ವಿಫಲ

Published:
Updated:
ಬಲಿಗೆ –ಮೆಣಸಿನಹಾಡ್ಯ ಬಸ್‌ ಸಂಚಾರ ವಿಫಲ

ಕಳಸ: ಹೋಬಳಿಯ ಹೊರನಾಡು ಸಮೀಪದ ಬಲಿಗೆ ಗ್ರಾಮವನ್ನು ಮೆಣಸಿನಹಾಡ್ಯದೊಂದಿಗೆ ಸಂಪರ್ಕಿ ಸುವ ರಸ್ತೆಯಲ್ಲಿ ಬಸ್‌ ಸಂಚಾರದ ಯತ್ನ ಮಂಗಳವಾರ ವಿಫಲವಾಗಿದೆ. ಈ ರಸ್ತೆಯು ಹೊಂಡ ಬಿದ್ದಿರುವು ದರಿಂದ 3 ದಿನಗಳಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿತ್ತು.

ಆದರೆ ಸ್ಥಳೀಯರು ಮತ್ತು ಶಾಲಾ ಮಕ್ಕಳ ಬವಣೆ ಅರಿತು ಮತ್ತೆ ಮಂಗಳವಾರ ಬಸ್‌ ಸಂಚಾರ ಪುನರಾರಂಭಿಸಲಾಯಿತು. ಮೆಣಸಿನ ಹಾಡ್ಯದಿಂದ ಬಲಿಗೆ ತಲುಪುವ ಇಳಿ ಜಾರಿನ ರಸ್ತೆಯಲ್ಲಿ ಬಸ್‌ ಸಿಲುಕಿ ಕೊಂಡಿ ತು.   ಮಳೆಯಿಂದ ಕೆಸರಿನಿಂದ ಕೂಡಿದ್ದು ಬಸ್‌ ಕೆಸರಿನಲ್ಲಿ ಸಿಲುಕಿಕೊಂಡಿತ್ತು.

ಸ್ಥಳೀಯರು ಹಲವು ಗಂಟೆ ಹರಸಾಹಸ ಮಾಡಿದ ನಂತರ ಬಸ್‌ ಮೇಲಕ್ಕೆ ತರಲಾಯಿತು.  ಆದ್ದರಿಂದ ಈ ರಸ್ತೆಯಲ್ಲಿ ಬಸ್‌ ಸಂಚಾರ ಸಾಧ್ಯವೇ ಇಲ್ಲ ಎಂಬಂತಾಗಿದೆ.

‘ಹೊರನಾಡಿನಿಂದ ಬಲಿಗೆ, ಮೆಣಸಿನಹಾಡ್ಯದ ಮೂಲಕ ಜಯಪುರ, ಶೃಂಗೇರಿ ಮಾರ್ಗದಲ್ಲಿ ಕಳಸದ ಅನ್ನಪೂರ್ಣೇಶ್ವರಿ ಮೋಟಾರ್ಸ್‌ ದಿನಕ್ಕೆ 6 ಬಾರಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಈಗಿನ ರಸ್ತೆಯ ಸ್ಥಿತಿ ನೋಡಿದರೆ ಸಂಚಾರ ಸದ್ಯಕ್ಕೆ ಸಾಧ್ಯವಿಲ್ಲ‘ ಎಂಬುದು ಸಂಸ್ಥೆಯ ಹೇಳಿಕೆ.

ಬಲಿಗೆಯಿಂದ ಹೊರನಾಡು ಮತ್ತು ಕಳಸದ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿಗೆ ತೆರಳುವ 83 ವಿದ್ಯಾರ್ಥಿಗಳು ಇದ್ದಾರೆ. ಹಾಗೆಯೇ ಅತ್ತ ಕಲ್ಲುಗುಡ್ಡೆ ಯಿಂದ ಜಯಪುರ ಮತ್ತು ಶೃಂಗೇರಿಗೆ ತೆರಳುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.

ಈ ವಿದ್ಯಾರ್ಥಿಗಳಿಗೆಲ್ಲ ರಿಯಾ ಯಿತಿ ಪಾಸ್‌ ವಿತರಿಸಿದ್ದೇವೆ. ಆದರೆ ರಸ್ತೆ ಸಮಸ್ಯೆಯಿಂದಾಗಿ ಈ ಮಾರ್ಗದಲ್ಲಿ  ಬಸ್‌ ಓಡಿಸುವುದು ಕಷ್ಟವಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ಉಮೇಶ್‌ ಭಟ್ ಬೇಸರದಿಂದ ಹೇಳುತ್ತಾರೆ.

ರಸ್ತೆಯಲ್ಲಿ ಬಸ್‌ ಸಿಲುಕಿದ್ದನ್ನು ಕಂಡು ಕಲ್ಲುಗುಡ್ಡೆ ಸಮೀಪದ ತಿಮ್ಮಪ್ಪಯ್ಯ ತಮ್ಮ ಸ್ವಂತ ಖರ್ಚಿನಲ್ಲಿ ಮಂಗಳವಾರ ಜಲ್ಲಿ ತಂದು ರಸ್ತೆಗೆ ಸುರಿದಿದ್ದಾರೆ. ಆದರೂ ಬಸ್‌ ಸಂಚಾರಕ್ಕೆ ಈ ರಸ್ತೆ ಯೋಗ್ಯ ವಾಗಿಲ್ಲ. ಜನಪ್ರತಿನಿಧಿಗಳು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಲಿಗೆಯ ನಿವಾಸಿ ಶಶಿಕಾಂತ ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry