ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿನ ಒಳಗೂ ಆಭರಣ

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಸುಂದರವಾಗಿ ಕಾಣಲು ಜನ ಏನು ಬೇಕಾದರೂ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಈಗಂತೂ ಕಿವಿಗೆ, ತುಟಿಗೆ, ಮೂಗಿಗೆ, ಹಣೆಗೆ, ಅಷ್ಟೇ ಏಕೆ, ಕಣ್ಣಿಗೂ ಸಾಕಷ್ಟು ವಿನ್ಯಾಸದ ಆಭರಣಗಳು ಬಂದಿವೆ. ಈ ವಿಷಯದಲ್ಲಿ ಜನರೂ ಹಲವು ಪ್ರಯೋಗಗಳನ್ನು ಮಾಡುತ್ತಾರೆ.

ಆದರೆ ಈ ಪ್ರಯೋಗ ಮಾತ್ರ ಬೆಚ್ಚಿ ಬೀಳಿಸುವುದು ಗ್ಯಾರಂಟಿ. ಕಣ್ಣಿನ ಒಳಗೆ ಆಭರಣ ಹಾಕುವ ‘ಎಕ್ಸ್‌ಟ್ರಾಕ್ಯುಲರ್ ಇಂಪ್ಲಾಂಟಿಂಗ್’ ಇದು.
ಅಪಾಯಕಾರಿ ಎನ್ನಿಸಿಕೊಂಡಿರುವ ಈ ಐಬಾಲ್‌ ಜ್ಯುವೆಲ್ಲರಿ ಹೆಚ್ಚು ಪ್ರಚಲಿತದಲ್ಲಿರುವುದು ನೆದರ್ಲೆಂಡ್‌ನಲ್ಲಿ.

ಇದನ್ನು ಅಳವಡಿಸುವ ಪ್ರಕ್ರಿಯೆಯೂ ಅಪಾಯಕಾರಿಯೇ. ಎರಡೂ ಕಣ್ಣುಗಳಿಗೆ ಅರಿವಳಿಕೆ ನೀಡಿದ ನಂತರ ಕಣ್ಣಿನ ಒಳಗೆ ಆಭರಣವನ್ನು ಕೂರಿಸಲಾಗುತ್ತದೆ.

ಪ್ಲಾಟಿನಂನಲ್ಲಿ ಹೃದಯ, ಸಂಗೀತ ಸ್ವರ, ನಕ್ಷತ್ರದ ಆಕಾರಗಳಲ್ಲಿ 3 ಎಂ.ಎಂ ಅಳತೆಯಲ್ಲಿರುತ್ತದೆ. ಒಂದು ವರ್ಷದವರೆಗೂ ಈ ಆಭರಣ ಕಣ್ಣಿನಲ್ಲೇ ಉಳಿಯಬಲ್ಲದಂತೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT