ಇದೇನಿದು ‘ಫೇಸ್‌ಕಿನಿ’

7

ಇದೇನಿದು ‘ಫೇಸ್‌ಕಿನಿ’

Published:
Updated:
ಇದೇನಿದು ‘ಫೇಸ್‌ಕಿನಿ’

ಬಿಕಿನಿ ಬಗ್ಗೆ ಕೇಳಿರುತ್ತೇವೆ. ಆದರೆ ಈ ಫೇಸ್‌ಕಿನಿ ಎಂದರೇನು?

ಹೌದು. ಫೇಸ್‌ಕಿನಿ ಎಂಬುದೂ ಇದೆ. ಸೌಂದರ್ಯ ಪ್ರಸಾಧನಗಳ ತಯಾರಿಕೆಯಲ್ಲಿ ಮುಂದಿರುವ ಚೀನಾ, ಸೂರ್ಯನ ಕಿರಣಗಳಿಂದ ಮುಖದ ಚರ್ಮ ಕಪ್ಪಾಗುವುದನ್ನು ತಡೆಯಲು ವಿನ್ಯಾಸಗೊಳಿಸಿರುವುದೇ ಫೇಸ್‌ಕಿನಿ.

ಸ್ಪೈಡರ್‌ ಮ್ಯಾನ್‌ನಿಂದ ಪ್ರೇರೇಪಿತಗೊಂಡ ಫ್ಯಾಷನ್ ಇದಂತೆ. ಸ್ವಿಮ್ ಸ್ಯೂಟ್‌ಗಳಿಗೆ ಹೊಂದಿಕೆಯಾಗಿ ಮೂರು ವರ್ಷದ ಹಿಂದೆ ಈ ಫೇಸ್‌ಕಿನಿಯನ್ನು ತಯಾರಿಸಿದ್ದು.

ಮೊದ ಮೊದಲು  ಇದನ್ನು  ಕಂಡು ಮುಖ ಮುಖ ನೋಡಿಕೊಳ್ಳುತ್ತಿದ್ದವರು ಇದೀಗ ಅದನ್ನೇ ಫ್ಯಾಷನ್ ಎನ್ನುತ್ತಿದ್ದಾರೆ. ಅದೇ ಈಗ ಟ್ರೆಂಡ್ ಆಗಿಬಿಟ್ಟಿದೆ. ಚೀನಾದ ಬೀಚ್‌ಗಳಲ್ಲಂತೂ ಎಲ್ಲೆಲ್ಲೂ ಫೇಸ್‌ಕಿನಿ ತೊಟ್ಟವರೇ.

ಮುಖವನ್ನು ಟ್ಯಾನ್ ಆಗದಂತೆ ತಡೆಯಲು ಕೆಲವು ಮಹಿಳೆಯರು ಬಳಸಿದರೆ, ತಮ್ಮನ್ನು ಯಾರೂ ಕಂಡುಹಿಡಿಯದೇ ಇರಲಿ ಎಂದು ಒಳಗೊಳಗೇ ಅಂದುಕೊಳ್ಳುವವರಿಗೂ ಕಮ್ಮಿಯಿಲ್ಲ.

ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಏಡಿ, ಜೆಲ್ಲಿ ಫಿಶ್‌ಗಳಿಂದ ತಪ್ಪಿಸಿಕೊಳ್ಳಲೂ ಇದು ಸಹಾಯಕ್ಕೆ ಬರುತ್ತದಂತೆ. ಗಾಢ ಕೇಸರಿ ಬಣ್ಣದ ಫೇಸ್‌ಕಿನಿ ಕಂಡರಂತೂ ಶಾರ್ಕ್‌ಗಳು ಓಡಿಹೋಗುತ್ತವಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry