ಕೊಡೆಗಳೇ ಕಾಮನಬಿಲ್ಲು

7

ಕೊಡೆಗಳೇ ಕಾಮನಬಿಲ್ಲು

Published:
Updated:
ಕೊಡೆಗಳೇ ಕಾಮನಬಿಲ್ಲು

ಜುಲೈ ಬರುತ್ತಿದ್ದಂತೆ ಈ ರಸ್ತೆಗಳ ತುಂಬೆಲ್ಲಾ ರಂಗು. ಬಣ್ಣಗಳ ನೆರಳೇ ಈ ಹಾದಿಯಲ್ಲಿ ನಿಮ್ಮ ಜೊತೆಗಿರುವುದು.  ಈ ಕೊಡೆಗಳ ಕಾಮನಬಿಲ್ಲು ಕಮಾನು ಕಟ್ಟುವುದು ಆಗಲೇ.

ಇದೇನೆಂದು ಯೋಚಿಸುತ್ತಿದ್ದೀರಾ? ಇದು ಅಂಬ್ರೆಲ್ಲಾ ಸ್ಟ್ರೀಟ್‌ನ ಕಲರ್‌ಫುಲ್ ನೋಟ.

ಪೋರ್ಚುಗಲ್‌ನ ಅಗ್ಯುಡ ಎಂಬಲ್ಲಿ  ಜುಲೈ ಬರುತ್ತಿದ್ದಂತೆ ಅಗಿಟ್ಯಾಗುಡ ಆರ್ಟ್‌ ಫೆಸ್ಟಿವಲ್‌ನ ಭಾಗವಾಗಿ ನಗರದ ಕೆಲವು ರಸ್ತೆಗಳು ಈ ರೀತಿ ಬಣ್ಣ ಬಣ್ಣದ ಕೊಡೆಗಳಿಂದ ಸಿಂಗಾರಗೊಳ್ಳುತ್ತವೆ.

ಮೂರು ವರ್ಷದ ಹಿಂದೆ  ಅಂಬ್ರೆಲ್ಲಾ ಸ್ಕೈ ಪ್ರಾಜೆಕ್ಟ್‌ ಭಾಗವಾಗಿ ಜನರ ಗಮನ ಸೆಳೆಯಲು ಈ ಕಲಾ ಪ್ರಕಾರವನ್ನು ಪ್ರಯೋಗಿಸಲಾಯಿತು. ಇದು ಯಶಸ್ವಿಯೂ ಆಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯಿತು. ಪ್ರವಾಸಿ ಆಕರ್ಷಣೆಯಾಗಿಯೂ ಹೆಸರು ಮಾಡಿತು.

ಪ್ರತಿ ವರ್ಷವೂ ಇಲ್ಲಿ ಬೇರೆ ಬೇರೆ ರೀತಿಯ  ಕೊಡೆಗಳಿಂದ ಅಲಂಕಾರ ಮಾಡುವ ಪರಿಪಾಠ ಬೆಳೆದುಬಂದಿದೆ. ಬಣ್ಣಗಳ ಸಂಯೋಜನೆ, ಕೊಡೆಗಳ ವಿಧಗಳೂ ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತವೆ. ಒಟ್ಟಾರೆ ಜುಲೈನಲ್ಲಿ ಪೋರ್ಚುಗೀಸ್‌ನ ಬೀದಿಬೀದಿಯಲ್ಲೂ ರಂಗಿನ ಲೋಕ ವಿಸ್ಮಯ ಮೂಡಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry