ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಕಟ್ಟೆಯಿಂದ (ಲಾಂಚ್ ಪ್ಯಾಡ್) ಆಗಸಕ್ಕೆ ನೆಗೆದ ರಾಕೆಟ್, 16 ನಿಮಿಷಗಳಲ್ಲಿ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಇರಿಸಿತು.

ರಾಕೆಟ್‌ಗೆ ಅಳವಡಿಸಲಾಗಿದ್ದ ಅಧಿಕ ಸಾಮರ್ಥ್ಯದ ಕ್ಯಾಮೆರಾ ಪ್ರತಿ ಹಂತವನ್ನು ಚಿತ್ರೀಕರಿಸಿಕೊಂಡಿದೆ. ಕಪ್ಪು ಬಿಳುಪು ಚಿತ್ರಗಳಲ್ಲಿ ಈ ವಿಡಿಯೊ ಮೂಡಿ ಬಂದಿದೆ.

ಎಸ್‌ಎಲ್‌ವಿ ಮಾರ್ಕ್ III ಯಶಸ್ವಿ ಉಡಾವಣೆಯಿಂದ ಖುಷಿಯಲ್ಲಿ ತೇಲುತ್ತಿದ್ದ ಇಸ್ರೊ ವಿಜ್ಞಾನಿಗಳು, ಆ ದೈತ್ಯ ರಾಕೆಟ್ ಅನ್ನು ‘ಬಾಹುಬಲಿ’ ಮತ್ತು ‘ವಿಧೇಯ ಹುಡುಗ’ ಎಂಬ ಅಡ್ಡ ಹೆಸರುಗಳಿಂದ ಕರೆದು ಸಂಭ್ರಮಿಸಿದ್ದರು.

[related]