ಆರ್‌ಬಿಐ ರೆಪೊ ದರ ಯಥಾಸ್ಥಿತಿ

7

ಆರ್‌ಬಿಐ ರೆಪೊ ದರ ಯಥಾಸ್ಥಿತಿ

Published:
Updated:
ಆರ್‌ಬಿಐ ರೆಪೊ ದರ ಯಥಾಸ್ಥಿತಿ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ  ದ್ವಿತೀಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿ ದರವನ್ನು (ರೆಪೊ) ಶೇ 6.25 ಮತ್ತು  ವಾಣಿಜ್ಯ ಬ್ಯಾಂಕ್‌ಗಳಿಂದ  ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್‌ ರೆಪೊ) ಶೇ 6ರ ಮಟ್ಟದಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಕೆಲ ರಾಜ್ಯ ಸರ್ಕಾರಗಳು ಕೃಷಿ ಸಾಲ ಮನ್ನಾ ಮಾಡಿರುವುದರಿಂದ ವಿತ್ತೀಯ ಕೊರತೆ ಏರಿಕೆಯಾಗಿ ಹಣದುಬ್ಬರ ಹೆಚ್ಚಳಗೊಳ್ಳುವ ಸಾಧ್ಯತೆ ಇರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳ ಶಾಸನಬದ್ಧ ನಗದು ಅನುಪಾತವನ್ನು (ಎಸ್‌ಎಲ್‌ಆರ್‌) ಶೇ 20.5 ರಿಂದ ಶೇ 20ಕ್ಕೆ ( ಶೇ 0.5) ರಷ್ಟು ಕಡಿಮೆಮಾಡಲಾಗಿದೆ. ಇದರಿಂದ ಬ್ಯಾಂಕಿಂಗ್‌ ವಲಯಕ್ಕೆ ₹50 ಸಾವಿರ ಕೋಟಿಗಳಷ್ಟು ಹೆಚ್ಚುವರಿ ನಗದು ಹರಿದು ಬರಲಿದೆ. ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಇದರಿಂದ ಹೆಚ್ಚಲಿದೆ.

ಗೃಹ ಸಾಲದ ಬಡ್ಡಿ ದರ ಇಳಿಕೆ ಸಾಧ್ಯತೆ: ರೆಪೊ ದರ ಇಳಿಕೆಯಾಗದಿದ್ದರೂ ಗೃಹ ಸಾಲದ ಬಡ್ಡಿ ದರದಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್‌ನಲ್ಲಿ ಪ್ರಕಟಸಿದ್ದ ಹಣಕಾಸು ನೀತಿಯಲ್ಲೂ ಆರ್‌ಬಿಐ ರೆಪೊ ದರ ಇಳಿಕೆ ಮಾಡದೆ 6.25 ಮೂಲಾಂಶವನ್ನೇ ಮುಂದುವರಿಸಿತ್ತು. ಆದರೂ ಕೆಲವು ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿ ದರ ಇಳಿಕೆ ಮಾಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry