ಏನ್‌ ಗುರು ಸಮಾಚಾರ?

7

ಏನ್‌ ಗುರು ಸಮಾಚಾರ?

Published:
Updated:
ಏನ್‌ ಗುರು ಸಮಾಚಾರ?

ಯಾವುದಿದು ಡ್ರೆಸ್‌?

ಬ್ರಸೆಲ್ಸ್‌ ಕಲಾಶಾಲೆಯ ಫ್ಯಾಷನ್‌ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ವಸ್ತ್ರ ವಿನ್ಯಾಸವಿದು. ಕಳೆದ ವಾರ ಏರ್ಪಡಿಸಿದ್ದ ಪದವಿ ಫ್ಯಾಷನ್‌ ಪ್ರದರ್ಶನದಲ್ಲಿ ರೂಪದರ್ಶಿಯೊಬ್ಬರು ಈ ಹೊಸ ಡ್ರೆಸ್‌ ತೊಟ್ಟು ರ್‌್ಯಾಂಪ್‌ ಮೇಲೆ ಕ್ಯಾಟ್‌ವಾಕ್‌ ಮಾಡಿದಾಗ...

****

ಬಾಳ ಸಂಗಾತಿಗಳ ಹೊತ್ತು...

ಚೀನಾದ ಹೇಲಾಂಗ್‌ಜಿಯಾಂಗ್‌ ಪ್ರಾಂತದ ಹಾರ್ಬಿನ್‌ ವಿಶ್ವವಿದ್ಯಾಲಯದಲ್ಲಿ 64 ಸಂಶೋಧನಾ ವಿದ್ಯಾರ್ಥಿಗಳಿಗೆ ಕಳೆದ ವಾರ ಡಬಲ್‌ ಸಂಭ್ರಮ. ಒಂದೆಡೆ ಕುಲಪತಿ ಬಂದು ಪದವಿ ಕೊಟ್ಟರೆ, ಇನ್ನೊಂದೆಡೆ ಅದುವರೆಗೆ ಸಹಪಾಠಿಯಾಗಿದ್ದ ಹುಡುಗಿ ಬಾಳ ಸಂಗಾತಿಯಾಗಿ ಬಂದು ಕೈಹಿಡಿಯಬೇಕೇ? ವಿಶ್ವವಿದ್ಯಾಲಯದ ಆವರಣದಲ್ಲೇ ಈ ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. ಹುಡುಗರಿಗೆ ಬಾಳ ಸಂಗಾತಿ ಸಿಕ್ಕ ಖುಷಿ ಎಷ್ಟಿತ್ತೆಂದರೆ ತಮ್ಮ ಮನದನ್ನೆಯರನ್ನು ಹೊತ್ತು ಕ್ರೀಡಾಂಗಣದ ಟ್ರ್ಯಾಕ್‌ ಮೇಲೆ ಓಟ ಕಿತ್ತರು!

****

ಮುಂದಿನ ಕ್ಲಾಸಿಗೆ ನೆಗೆತ!

ಪಶ್ಚಿಮ ಬಂಗಾಳದಲ್ಲಿ ಈಚೆಗೆ 12ನೇ ತರಗತಿ ಫಲಿತಾಂಶ ಹೊರಬಿತ್ತು. ಕಾಲೇಜಿನಲ್ಲಿ ಈ ವಿದ್ಯಾರ್ಥಿನಿಯರು ಫಲಿತಾಂಶ ನೋಡಿದರಾ? ಒಳ್ಳೆಯ ಅಂಕಗಳು ಬಂದಿದ್ದವಂತೆ. ಗುಂಪಿನಲ್ಲಿದ್ದ ಯಾರೋ ಇನ್ನು ನಾವೆಲ್ಲ ಪದವಿ ಕ್ಲಾಸ್‌ಗೆ ನೆಗೆಯಬೇಕಲ್ಲ ಅಂದರಂತೆ. ಅಷ್ಟಕ್ಕೆ ಕಾಲೇಜಿನಿಂದ ಹೊರಬಂದವರೇ ಈ ಹುಡುಗಿಯರು ನೆಗೆದೇಬಿಟ್ಟರು. ನಾವೀಗ ಪದವಿ ವಿದ್ಯಾರ್ಥಿನಿಯರು ಎಂದೂ ಸಾರಿದರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry