ಪೆಪ್ಸಿ ಜತೆಗಿನ ಜಾಹೀರಾತು ಒಪ್ಪಂದ ನವೀಕರಣಕ್ಕೆ ಕೊಹ್ಲಿ ನಕಾರ

7

ಪೆಪ್ಸಿ ಜತೆಗಿನ ಜಾಹೀರಾತು ಒಪ್ಪಂದ ನವೀಕರಣಕ್ಕೆ ಕೊಹ್ಲಿ ನಕಾರ

Published:
Updated:
ಪೆಪ್ಸಿ ಜತೆಗಿನ ಜಾಹೀರಾತು ಒಪ್ಪಂದ ನವೀಕರಣಕ್ಕೆ ಕೊಹ್ಲಿ ನಕಾರ

ನವದೆಹಲಿ: ಸಾಫ್ಟ್‌ ಡ್ರಿಂಕ್ಸ್ ಕಂಪೆನಿ ಪೆಪ್ಸಿ ಜತೆಗಿನ ಆರು ವರ್ಷಗಳ ಜಾಹೀರಾತು ಒಪ್ಪಂದವನ್ನು ಮುಂದುವರಿಸಲು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರಾಕರಿಸಿದ್ದಾರೆ. ತಾವು ಸೇವಿಸದ ಅಥವಾ ಬಳಸದ ಉತ್ಪನ್ನದ ಬಗ್ಗೆ ಜಾಹೀರಾತು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ನಾನು ಒಂದು ಉತ್ಪನ್ನವನ್ನು ಬಳಸುತ್ತಿಲ್ಲ ಎಂದಮೇಲೆ ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಆ ಉತ್ಪನ್ನವನ್ನು ಬಳಸಿ ಎಂದು ಇತರರನ್ನು ಒತ್ತಾಯಿಸಲಾರೆ’ ಎಂದು ಕೊಹ್ಲಿ ಹೇಳಿದ್ದಾರೆ.

‘ನಾನು ದೈಹಿಕ ಕ್ಷಮತೆ ಕಾಪಾಡಲು ಆರಂಭಿಸಿದಾಗ ಅದು ಉತ್ತಮ ಜೀವನಕ್ರಮದ ಮೇಲೆ ಆಧಾರಿತವಾಗಿತ್ತು. ಅದಕ್ಕೆ ಹೊರತಾದ್ದು ಏನಾದರು ಇದ್ದರೆ ನಾನದನ್ನು ತ್ಯಜಿಸುತ್ತೇನೆ. ಅಂಥದ್ದನ್ನು ಉತ್ತೇಜಿಸಲು ಇಷ್ಟಪಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry