ಮೌಂಟ್ ಎವರೆಸ್ಟ್ ಏರಿದ ಮೊದಲ ಕ್ಯಾನ್ಸರ್ ಪೀಡಿತ ವ್ಯಕ್ತಿ

7
ಕೆಲವೇ ತಿಂಗಳು ಮಾತ್ರ ಬದುಕುಳಿಯಲ್ಲಿದ್ದಾರೆ

ಮೌಂಟ್ ಎವರೆಸ್ಟ್ ಏರಿದ ಮೊದಲ ಕ್ಯಾನ್ಸರ್ ಪೀಡಿತ ವ್ಯಕ್ತಿ

Published:
Updated:
ಮೌಂಟ್ ಎವರೆಸ್ಟ್ ಏರಿದ ಮೊದಲ ಕ್ಯಾನ್ಸರ್ ಪೀಡಿತ ವ್ಯಕ್ತಿ

ಲಂಡನ್: ಬ್ರಿಟನ್ ಪ್ರಜೆ ಇಯಾನ್ ಟೂತಿಲ್ ಎಂಬುವರು  ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಪ್ರಪಂಚದ ಅತಿ ಎತ್ತರದ ಶಿಖರ ಏರಿದ ಮೊದಲ ಕ್ಯಾನ್ಸರ್ ಪೀಡಿತ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಲಂಡನ್‌ನಲ್ಲಿ ನೆಲೆಸಿರುವ ಟೂತಿಲ್ ಅವರು 2015ರಿಂದ ಕರುಳಿನ ಕ್ಸಾನ್ಸರ್‌ನಿಂದ ಬಳಲುತ್ತಿದ್ದಾರೆ.  ಕೆಲ  ತಿಂಗಳು ಮಾತ್ರ ಬದುಕಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ಯಾನ್ಸರ್ ಸಹಾಯಾರ್ಥ ಸಂಸ್ಥೆ ಮೆಕ್‌ಮಿಲನ್‌ಗಾಗಿ ಅವರು ಈ ಯಾತ್ರೆ ಕೈಗೊಂಡಿದ್ದರು. ಇದರ ಮೂಲಕ ಅವರು ₹26  ಲಕ್ಷ ಸಂಗ್ರಹಿಸಿದ್ದಾರೆ.

ಇವರು ಎವರೆಸ್ಟ್‌ನ ತುತ್ತತುದಿಯನ್ನು ಸೋಮವಾರ ತಲುಪಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry